ಸುದ್ದಿ ಕನ್ನಡ ವಾರ್ತೆ
ಜೋಯಿಡಾ ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ ವಿಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಷಾಲಿಟಿ ಆರೋಗ್ಯ ಕೇಂದ್ರ ಧಾರವಾಡ ಕೆನರಾ ಬ್ಯಾಂಕ್, ದೇಶಪಾಂಡೆ ಆರ್ ಸೆಟ್ ( ರಿ,) ಹಳಿಯಾಳ ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ ಧಾರವಾಡ ಜಿಲ್ಲಾ ಶಾಖೆ ತಾಲೂಕ ಆರೋಗ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಜೋಯಿಡಾ ಸರ್ಕಾರಿ ತಾಲೂಕ ಆಸ್ಪತ್ರೆ ಜೋಯಿಡಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೋಹಿಡಾ ಕೆಎಲ್ಇ ವಿಮಲ್ ದೇಶಪಾಂಡೆ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ದಾಂಡೇಲಿ ಇವರ ಸಹಯೋಗದೊಂದಿಗೆ 12ವಯಸ್ಸಿನೊಳಗಿನ ಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ತಾಲೂಕ ಆಸ್ಪತ್ರೆ ಜೊಯಿಡಾದಲ್ಲಿ ದಿನಾಂಕ ೨೨.೦೩.೩೦೨೬ ರಂದು ಹಮ್ಮಿಕೊಳ್ಳಲಾಯಿತು ಈ ಶಿಬಿರಕ್ಕೆ ಉದ್ಘಾಟಕರಾಗಿ ಶ್ರೀ ಸನ್ಮಾನ್ಯ ಆರ್. ವಿ. ದೇಶಪಾಂಡೆ ಶಾಸಕರು ಹಳಿಯಾಳ , ದಾಂಡೇಲಿ ಮತ್ತು ಜೊಯಿಡಾ ಹಾಗೂ ಚೇರ್ಮನ್ ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ , ದೀಪವನ್ನು ಬೆಳಗಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಾನು ನನ್ನ ಕ್ಷೇತ್ರದಲ್ಲಿ ಮೊದಲಿಗೆ ಒತ್ತು ಕೊಡುವುದು ಆರೋಗ್ಯ, ಶಿಕ್ಷಣ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡುತ್ತೇನೆ ಹೆಲ್ತ್ ಇಸ್ ವೆಲ್ತ್ ಆರೋಗ್ಯವೇ ಭಾಗ್ಯ ಆರೋಗ್ಯವಂತ ವ್ಯಕ್ತಿ ಜೀವನದಲ್ಲಿ ಏನಲ್ಲ ಸಾಧನೆ ಮಾಡಬಹುದು ಎಂದು ಉದ್ದೇಶಿಸಿ ಮಾತನಾಡಿದರು ಮುಖ್ಯ ಅತಿಥಿಗಳಾದ ಡಾಕ್ಟರ್ ರಾಜನ್ ದೇಶಪಾಂಡೆ ಹಿರಿಯ ಮಕ್ಕಳ ತಜ್ಞರು ವಿಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಷಾಲಿಟಿ ಆರೋಗ್ಯ ಕೇಂದ್ರ ಧಾರವಾಡ ಇವರು ಇಲ್ಲಿ ಬಂದಿರುವ ಎಲ್ಲಾ ವೈದ್ಯರು ಚಿಕಿತ್ಸೆ ನೀಡುವ ಸಲುವಾಗಿ ಬಂದಿರುತ್ತಾರೆ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು ಕಾರ್ಯಕ್ರಮದಲ್ಲಿ ಆಡಳಿತ ಅಧಿಕಾರಿಗಳಾದ ತಾಲೂಕ ಆಸ್ಪತ್ರೆ ಜೋಯಿಡಾ ಶ್ರೀ ವಿಜಯ್ ಕೊಚ್ಚರ್ಗಿ ಪ್ರಸ್ತಾವಿಕವಾಗಿ ಮತ್ತು ಅತಿಥಿಗಳ ಕುರಿತು ಸ್ವಾಗತ ಮಾಡಿದರು ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಕಾರ್ಯಕ್ರಮವನ್ನು ನಿರೂಪಿಸಿದರು ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಜೋಯಿಡಾ ಅನುದಾನದಲ್ಲಿ ೪.೭೫ ಲಕ್ಷ ರೂಪಾಯಿಗಳ ಅನೆಸ್ ಸ್ಟೇಶನ್ ಮಶೀನ ಮತ್ತು ಅದರ ವೆಂಟಿಲೇಟರ್ ಅನ್ನು ತಾಲೂಕ ಆಸ್ಪತ್ರೆ ಜೋಯಿಡಾಕ್ಕೆ ಮಾನ್ಯ ಶಾಸಕರಾದ ಶ್ರೀ ಆರ್ ವಿ ದೇಶಪಾಂಡೆ ಅವರು ಉದ್ಘಾಟನೆ ಮಾಡಿ ಹಸ್ತಾಂತರಿಸಿದರು ವೇದಿಕೆ ಮೇಲೆ ಡಾಕ್ಟರ್ ಸುಜಾತಾ ಉಕ್ಕಲಿ ತಾಲೂಕ ಆರೋಗ್ಯ ಅಧಿಕಾರಿಗಳು ಜೋಯಿಡಾ , ಶ್ರೀ ಪ್ರಶಾಂತ್ ಬಡ್ಡಿ ನಿರ್ದೇಶಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ,ಶ್ರೀ ಮಂಜುನಾಥ್ ಮುನವಳ್ಳಿ ತಹಸಿಲ್ದಾರ್ ಜೋಯಿಡಾ ಶ್ರೀಮತಿ ಭಾರತಿ ಎನ್. ಕಾರ್ಯನಿರ್ವಹಣಾಧಿಕಾರಿಗಳು ತಾಲೂಕ್ ಪಂಚಾಯತ್ ಜೋಯಿಡಾ, ಶ್ರೀ ಸಿದ್ದಲಿಂಗ ಕೊರವರ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೋಯಿಡಾ ಶ್ರೀ ಅಬ್ದುಲ್ ಬಸಿರಹ್ಮದ್ ಶೇಖ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜೋಯಿಡಾ. ಶ್ರೀ ವಿನಾಯಕ್ ಚೌಹಾನ್ ಯೋಜನಾ ಸಂಯೋಜಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ.ವೈದ್ಯರ ತಂಡ ಡಾಕ್ಟರ್ ಸುಹಾಸ್ ದೇಸಾಯಿ, ಡಾಕ್ಟರ್ ಕವನ್ ದೇಶಪಾಂಡೆ, ಡಾಕ್ಟರ್ ಅಶೋಕ್ ಜಾದವ್ ಡಾಕ್ಟರ್ ವಿಜಯ್ ತ್ರಾಸದ ಡಾಕ್ಟರ್ ಅರುಣ್ ಬಾಬಲೇಶ್ವರ್ ಡಾಕ್ಟರ್ ಅಚ್ಚುತ್ ಕೆ ವಿ ಡಾಕ್ಟರ್ ಶರದ್ ನಾಡ್ಕರ್ಣಿ ಡಾಕ್ಟರ್ ಅಮೋಗಿಮಠ ಆರ್ ಡಾಕ್ಟರ್ ವಿಜಯಲಕ್ಷ್ಮಿ ನಾಡಕರ್ಣಿ ಡಾಕ್ಟರ್ ರೇಖಾ ಮಾನೆ ಡಾಕ್ಟರ್ ಎ. ಸಿ. ಸ್ವಾಮಿ ಡಾಕ್ಟರ್ ಏನ್. ಎಂ. ಅಂಗಡಿ ಡಾಕ್ಟರ್ ಶಂಕರ್ ಯಾದವಾಡ ಮತ್ತು ಶ್ರೀ ಸದಾನಂದ ದಬ್ಬಗಾರ್ ಸಾಮಾಜಿಕ ಕಾರ್ಯಕರ್ತರು, ಶ್ರೀ ಮಾರುತಿ ಪಾಟೀಲ್ ಸಾಮಾಜಿಕ ಕಾರ್ಯಕರ್ತರು, ಶ್ರೀ ಸಂಜಯ್ ಹಣಬರ ಸಾಮಾಜಿಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ತಾಲೂಕ ಆಸ್ಪತ್ರೆ ಎಲ್ಲ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ಎಲ್ಲಾ ಸಿಬ್ಬಂದಿ ವರ್ಗದವರು ಸಹಕಾರ ನೀಡಿದರು,ಈ ಶಿಬಿರದಲ್ಲಿ ೨೨೫ ಫಲಾನುಭವಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.
