ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ರವಿವಾರ ಸಂಜೆಯ ಹಾಗೂ ರಾತ್ರಿಯ ವೇಳೆ ಬಿಟ್ಟು ಬಿಟ್ಟು ಮಳೆ ಬಿದ್ದ ವರದಿಯಾಗಿದೆ.
ಅಗ್ನೇಯ ಬಂಗಾಲಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಮಳೆಯಾದ ಕಾರಣ ಅಡಿಕೆಯನ್ನು ತಮ್ಮ ತಮ್ಮ ಮನೆಯ ಆವರಣದಲ್ಲಿ,ಮನೆಯ ಮೇಲೆ ಒಣಗಿಸಲು ಹಾಕಿದ ಒಣಗಿದ ಚಾಲಿ ಅಡಿಕೆಯನ್ನು ಮಳೆಯಿಂದ ಒದ್ದೆಮಾಡಿಕೊಂಡಿದ್ದು ಅಡಿಕೆ ಬೆಳೆಗಾರರ ಬೇಸರಕ್ಕೆ ಕಾರಣವಾಯಿತು.
ಈಗಾಗಲೇ ಅಡಿಕೆಗೆ ಕೊಳೆ, ರೋಗ ಬಾಧೆ, ಕಡಿಮೆ ಇಳುವರಿಯಿಂದ ತತ್ತರಿಸಿದ್ದು,ಅಡಿಕೆ ಬೆಳೆಗೆ ಒಳ್ಳೇಯ ದರವಿದ್ದರೂ ಇಳುವರಿ ಕಡಿಮೆ ಇರುವುದು,ಅಕಾಲಿಕ ಮಳೆ ಇನ್ನೂ ಅಡಿಕೆ ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.ವಿಮಾ ಕಂಪೆನಿಗಳಿಂದ ಬರಬೇಕಾದ ಪರಿಹಾರ ಹಣ ಜಮಾ ಆಗುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದಾರೆ.
