ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಮೈಸೂರಿನಲ್ಲಿ ದಸರಾ ಹಬ್ಬದ ನಿಮಿತ್ತ ನಡೆದ ವಾಟರ್ ಅಕ್ಟಿವಿಟಿಸ್ನಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಜೋಯಿಡಾ ತಾಲೂಕಿನ ಗಣೇಶ ಗುಡಿಯ ಫ್ಲೈ ಕ್ಯಾಚರ್ ಅಡವೆಂಚರ ನ ಕಾಳಿ ಬಾಯ್ಸ್ ಮತ್ತು ಕಾಳಿ ಟೈಗರ್ಸ್ ಗಳು ಜಯಭೇರಿ ಭಾರಿಸಿದ್ದಾರೆ. ದಸರಾ ಹಬ್ಬದ ನಿಮಿತ್ತ ಶ್ರೀರಂಗ ಪಟ್ಟಣ ದಲ್ಲಿ ನಡೆದ ಕಯಾಕಿಂಗ್ ಮತ್ತು ಕ್ರಾಸ್ ವಾಟರ್ ಕಾಂಪಿಟೇಷನ್ನ ನಲ್ಲಿ ಪ್ಲೈ ಕ್ಯಾಚರ್ ತಂಡದ ಮುಖ್ಯಸ್ಥ ಚಾಂದ ಕುಟ್ಟಿನೇತೃತ್ವದ ತಂಡ ಜಯಭೇರಿ ಬಾರಿಸಿ ಉತ್ತರ ಕನ್ನಡ ಜಿಲ್ಲೆಗೆ ಗೌರವ ತಂದಿದೆ. ಅವರಿಗೆ ಮೈಸೂರಿನ ದಸರಾ ಹಬ್ಬದ ಸಮೀತಿ ಪ್ರಶಸ್ತಿ ಪತ್ರ ಗಳನ್ನು ನೀಡಿ ಗೌರವಿಸಿದೆ. ತಂಡದಲ್ಲಿ ಪ್ರಮುಖ ರಾದ ಆಶ್ರಪ್, ಸುಮಿತ್, ರೋಹಿತ್ ಯಾಸೀನ್, ಮತ್ತಿತರರು ಕ್ರೀಡೆಯಲ್ಲಿ ಸಾಹಸ ಮಾಡಿದ್ದರು. ತಂಡದ ಸಂತೋಷಕ್ಕೆ ತಾಲೂಕಿನಲ್ಲಿ ತುಂಬಾ ಮೆಚ್ಚುಗೆ ವ್ಯಕ್ತ ವಾಗಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಚೆಲ್ಲಿದೆ ನಗೆಯಾ ಪನ್ನಿರ, ಎಲ್ಲೆಲ್ಲೂ……ನಗೆಯ ಪನ್ನಿರ ಎಂದು ಸುಂದರ ವಾಗಿ ಪ್ರಸಿದ್ದ ಗಾಯಕ ಪಿ ಬಿ ಶ್ರೀನಿವಾಸ್ ಅವರು ಹಾಡಿದ್ದಾರೆ ಈ ಹಾಡು ಹಿಂದೆ, ಮುಂದೆ ಅಷ್ಟೇ ಅಲ್ಲ ಎಂದೆಂದಿಗೂ ಸುಂದರವೇ, ಆಗಿದೆ,ಅಂತ ಸುಂದರ ಮೈಸೂರಿನಲ್ಲಿ ನಮ್ಮ ಕಾಳಿ ಬಾಯ್ಸ್ ಮತ್ತು ಕಾಳಿ ಟೈಗರ್ಸ್ ಗಳು ಮೆರೆದಿದ್ದಕ್ಕೆ ಅವರಿಗೊಂದು ದೊಡ್ಡ ಸಲಾಂ, ವ್ಯಕ್ತ ವಾಗಿದೆ.