ಶಿರಸಿ: ಉತ್ತರ ಕನ್ನಡದ ಶಿರೂರು ಭೂಕುಸಿತ ಸಂಬಂಧಿಸಿ ನೊಂದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯ ಅಡಿಯಲ್ಲಿ ನೆರವು ಒದಗಿಸಲು ಅನುದಾನ ಮಂಜೂರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಅವರು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದು, ಕೇಂದ್ರ ಸರಕಾರದ ಎಲ್ಲ ನೆರವು ಹಾಗೂ ಭರವಸೆ ನೊಂದ ಕುಟುಂಬಗಳಿಗೆ ಇದೆ. ದುರ್ಘಟನೆಯಲ್ಲಿ ನೊಂದವರ ಪರ ಪ್ರಾರ್ಥಿಸುವದಾಗಿ ಕೂಡ ತಿಳಿಸಿದ್ದಾರೆ.
ಸಂಸದ ಕಾಗೇರಿ ಕಳೆದ ಜುಲೈ ೩೧ರಂದು ಪ್ರಧಾನಿಗಳಿಗೆ ಪತ್ರ ಬರೆದು ನೆರವಿನ ಮನವಿ ಮಾಡಿದ್ದರು. ಆಗಷ್ಟ ೨೦ಕ್ಕೆ ಪ್ರಧಾನಿಗಳು ಪತ್ರದ ಮೂಲಕ ಪ್ರತಿಕ್ರಿಯೆ ನೀಡಿದ್ದು ಗುರುವಾರ ಅದು ಸಂಸದರ ಕೈ ಸೇರಿದೆ.