ಸುದ್ಧಿಕನ್ನಡ ವಾರ್ತೆ
ಕಾರವಾರ: ನಟ ಹಾಗೂ ನಿರ್ದೇಶಕ ರಮೇಶ ಅರವಿಂದ ರವರು ತಮ್ಮ ಕುಟುಂಬ ಸಮೇತರಾಗಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಕಳೆದ ಎರಡು ದಿನಗಳಿಂದ ಉತ್ತರಕನ್ನಡ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.
ರಮೇಶ ಅರವಿಂದ ತಮ್ಮ ಕುಟುಂಬದೊಂದಿಗೆ ಕಳೆದ ಎರಡು ದಿನಗಳ ಹಿಂದೆ ದಾಂಡೇಲಿಗೆ ಆಗಮಿಸಿ ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.ಶನಿವಾರ ಬೆಳಿಗ್ಗೆ ದಾಂಡೇಲಿಯಿಂದ ಕಾರವಾರದ ದೇವಬಾಗ್ ಬೀಚ್ ಗೆ ಆಗಮಿಸಿದ್ದರು.
ಮಧ್ಯಾನ್ಹ ದೇವಬಾಗ್ ರೆಸಾರ್ಟನಲ್ಲೇ ಊಟ ಸವಿದ ರಮೇಶ ಅರವಿಂದ ಕುಟುಂಬ ಕಡಲ ತೀರದಲ್ಲಿ ಸುತ್ತಾಡಿ ಸಂಜೆ ಬೋಟ್ ಮೂಲಕ ಕೂರ್ಮಗಡ ರೆಸಾರ್ಟಗೆ ತೆರಳಿದ್ದು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.