ಸುದ್ಧಿಕನ್ನಡ ವಾರ್ತೆ
ನವದೆಹಲಿ: ಭಾರತ ದೇಶದ ಯುವ ಶಕ್ತಿಯು 2047 ರ ವೇಳೆಗೆ ಭಾರತ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಾಮಥ್ರ್ಯವನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ ಅವರು ದೇಶದ ಯುವಕರನ್ನುದ್ದೇಶಿಸಿ ಮಾತನಾಡಿದರು.

ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವುದು ಕಷ್ಟಕರ ಎಂದು ಜನರು ಭಾವಿಸಬಹುದು, ಆದರೆ ನಾವು ಅದನ್ನು ಶೀಘ್ರದಲ್ಲಿಯೇ ಸಾಧಿಸಬಹುದು ಎಂಬ ವಿಶ್ವಾಸ ನನಗಿದೆ. ದೊಡ್ಡ ಕನಸು ಕಾಣುವ ಮೂಲಕ ಮತ್ತು ಆ ಕನಸುಗಳಿಗೆ ನಾವು ಸಂಪೂರ್ಣವಾಗಿ ಸಮರ್ಪಿತವಾಗುವ ಮೂಲಕ ನಾವು ನಮ್ಮ ಯಾವುದೇ ಕನಸುಗಳನ್ನು ನನಸಾಗಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಜಗತ್ತಿನ ಯಾವುದೇ ಶಕ್ತಿಯು ಭಾರತದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ. ಯಾವುದೇ ದೆಶವು ಮುಂದುವರೆಯಲು ದೊಡ್ಡ ಗುರಿಗಳನ್ನು ಸಾಧಿಸಬೇಕಾಗುತ್ತದೆ, ಇಂದಿನ ಭಾರತ ದೇಶ ಕೂಡ ಇದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.