Banner Ad

ಸುದ್ದಿ ಕನ್ನಡ ವಾರ್ತೆ
​ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದ ಪ್ರತಿಭಾವಂತ ಶೂಟರ್ ಕು. ಐಶ್ವರ್ಯ ರವಿಚಂದ್ರ ಬಾಲೆಹೊಸೂರು ಅವರು ಜರ್ಮನಿಯ ಸುಹಲ್‌ನಲ್ಲಿ ನಡೆದ ISSF ಜೂನಿಯರ್ ವಿಶ್ವ ಶೂಟಿಂಗ್ ಚಾಂಪಿಯನ್‌ಷಿಪ್ 2026ರ ಮಹಿಳೆಯರ 50 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು 540 ಅಂಕಗಳನ್ನು ಗಳಿಸಿ ಚಿನ್ನದ ಪದಕಕ್ಕೆ ಸಮಬಲ ಸಾಧಿಸಿದ್ದರೂ, ‘ಇನ್ನರ್-10’ ಶಾಟ್‌ಗಳ ಆಧಾರದ ಮೇಲೆ ಅಲ್ಪ ಅಂತರದಲ್ಲಿ ಚಿನ್ನದ ಪದಕ ತಪ್ಪಿತು.

​ಐಶ್ವರ್ಯ ಅವರ ಈ ಸಾಧನೆಯಿಂದ ಭಾರತವು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 25 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದು, ದೇಶಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ದೊರಕಿದೆ.
​ಈ ಸಾಧನೆಗಾಗಿ ಹುಬ್ಬಳ್ಳಿ ಹಾಗೂ ಉತ್ತರ ಕರ್ನಾಟಕದ ವಿವಿಧ ಸಂಘ-ಸಂಸ್ಥೆಗಳು ಮತ್ತು ಗಣ್ಯರು ಐಶ್ವರ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Banner Ad

ಮಾಜಿ ಅಧ್ಯಕ್ಷರು, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಸದಾನಂದ ವಿ. ಡಂಗನವರ ಅವರ ನೇತೃತ್ವದಲ್ಲಿ 2026ರ ಜೂನ್ 27ರಂದು ಶನಿವಾರ ಸಂಜೆ 8 ಗಂಟೆಗೆ ಹುಬ್ಬಳ್ಳಿಯ ವಿದ್ಯಾನಗರದ ಶಿವಶಂಕರ ದೇವಸ್ಥಾನದಲ್ಲಿ ಐಶ್ವರ್ಯ ಅವರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

Banner Ad