ಸುದ್ದಿ ಕನ್ನಡ ವಾರ್ತೆ
ನವದೆಹಲಿ: ಭಾರತದ ನೂತನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಆಗಿ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಮೂರೂ ಸೇನಾ ಪಡೆಗಳ ನಡುವೆ ಸಮನ್ವಯತೆಯನ್ನು ಬಲಪಡಿಸುವುದು ಮತ್ತು ಮಿಲಿಟರಿ ಥಿಯೇಟರ್ ಕಮಾಂಡ್ ಯೋಜನೆ ಜಾರಿಗೆ ತರುವುದು ಅವರ ಪ್ರಮುಖ ಆದ್ಯತೆಗಳಾಗಿವೆ.
ಪಾಕಿಸ್ತಾನ ಮತ್ತು ಚೀನಾ ವಿಷಯಗಳಲ್ಲಿ ರಕ್ಷಣಾ ತಜ್ಞರೆಂದು ಹೆಸರಾಗಿರುವ ಜನರಲ್ ಸುಬ್ರಮಣಿ, ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದಲ್ಲಿ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಜುಲೈ 31 ರಂದು ಅವರು ಸೇನಾ ಉಪ ಮುಖ್ಯಸ್ಥರಾಗಿ ನಿವೃತ್ತರಾಗಿದ್ದರು.
ಸಿಡಿಎಸ್ ಆಗಿ ಜನರಲ್ ಸುಬ್ರಮಣಿ ಅವರ ಪ್ರಾಥಮಿಕ ಜವಾಬ್ದಾರಿಯು, ಮೂರೂ ಸೇವೆಗಳ ನಡುವೆ ಜಂಟಿ ಕಾರ್ಯಾಚರಣೆಯನ್ನು ‘ಸಮಗ್ರ ಥಿಯೇಟರ್ ಕಮಾಂಡ್’ಗಳ ರಚನೆ ಮತ್ತು ಅನುಷ್ಠಾನದ ಮೂಲಕ ಮಿಲಿಟರಿ ಥಿಯೇಟರೈಸೇಶನ್ ಯೋಜನೆಯನ್ನು ಮುನ್ನಡೆಸುವುದಾಗಿದೆ.
ನಾಲ್ಕು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸುದೀರ್ಘ ಮತ್ತು ಮಿಲಿಟರಿ ವೃತ್ತಿಜೀವನದಲ್ಲಿ, ಅವರು ವ್ಯಾಪಕ ಶ್ರೇಣಿಯಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಜೊತೆಗೆ ಹಲವು ಪ್ರಮುಖ ಕಮಾಂಡ್, ಸ್ಟಾಫ್ ಮತ್ತು ತರಬೇತಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರು ಜುಲೈ 1, 2024 ರಿಂದ ಜುಲೈ 31, 2025 ರವರೆಗೆ ಸೇನಾ ಉಪ ಮುಖ್ಯಸ್ಥರಾಗಿ ಮತ್ತು ಅದಕ್ಕೂ ಮುನ್ನ ಮಾರ್ಚ್ 2023 ರಿಂದ ಜೂನ್ 2024 ರವರೆಗೆ ಸೆಂಟ್ರಲ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದರು.
