ಸುದ್ದಿ ಕನ್ನಡ ವಾರ್ತೆ

ವಡೋದರಾ ವಾಯುಪಡೆ ನಿಲ್ದಾಣದಿಂದ ವಿಶೇಷ ವಾಯುಪಡೆಯ ವಿಮಾನದ ಮೂಲಕ 250 ಅಕ್ರಮ ಬಾಂಗ್ಲಾದೇಶಿ ಪ್ರಜೆಗಳನ್ನು ಢಾಕಾಗೆ ಕಳುಹಿಸಲಾಗಿದೆ. ಈ ಕ್ರಮವು ರಾಜ್ಯದಲ್ಲಿ ನುಸುಳುಕೋರರ ವಿರುದ್ಧ ನಡೆಯುತ್ತಿರುವ ಅಭಿಯಾನದ ಭಾಗವಾಗಿದೆ. ಕಳೆದ ಎರಡು ತಿಂಗಳಲ್ಲಿ  ಒಟ್ಟು 1,200ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ಬಂಧಿಸಿ ಅವರ ದೇಶಕ್ಕೆ ಗಡೀಪಾರು ಮಾಡಲಾಗಿದೆ.

ವಿಮಾನ ನಿಲ್ದಾಣದಲ್ಲಿ  police  ಬಿಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಸಂಭವನೀಯ ಅಹಿತಕರ ಘಟನೆಯನ್ನು ತಪ್ಪಿಸಲು ಎಲ್ಲಾ ವಲಸಿಗರನ್ನು ಕೈಕೋಳದಲ್ಲಿ ಇರಿಸಲಾಗಿತ್ತು. ವಲಸಿಗರನ್ನು ವಾಹನಗಳ ಮೂಲಕ ವಿಮಾನ ನಿಲ್ದಾಣಕ್ಕೆ ಕರೆತಂದು ನಂತರ ವಾಯುಪಡೆಯ ವಿಮಾನ ಹತ್ತಲಾಯಿತು.

 

ನಕಲಿ ದಾಖಲೆಗಳನ್ನು ರಚಿಸಿ ಒಳನುಸುಳುವವರಿಗೆ ಆಶ್ರಯ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಜರಾತ್ ಗೃಹ ಸಚಿವ ಹರ್ಷ ಸಾಂಘ್ವಿ ಎಚ್ಚರಿಸಿದ್ದಾರೆ. ಕೆಲವು ಒಳನುಸುಳುವವರು ಮಾನವ ಕಳ್ಳಸಾಗಣೆ, ಮಾದಕವಸ್ತು ವ್ಯವಹಾರ ಮತ್ತು ಭಯೋತ್ಪಾದಕ ಜಾಲಗಳಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾಗಿದೆ ಎಂದು DGP ವಿಕಾಸ್ ಸಹಾಯ್ ಹೇಳಿದ್ದಾರೆ.