ಸುದ್ಧಿಕನ್ನಡ ವಾರ್ತೆ
ಚೆನ್ನೈ ಮತ್ತು ಗುವಾಹಟಿ ನಡುವಿನ ಇಂಡಿಗೊ ವಿಮಾನ ಪೈಲಟ್ ‘ಮೇಡೆ’ (Mayday) bಸಂದೇಶ ಕಳುಹಿಸಿದ ನಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ ನಡೆದಿದೆ.

ಜೂನ್ 19 ರಂದು ಈ ಘಟನೆ ನಡೆದಿದೆ. 168 ಪ್ರಯಾಣಿಕರು ತೆರಳುತ್ತಿದ್ದ ವಿಮಾನದಲ್ಲಿ ಇಂಧನದ ಕೊರತೆ ಉಲ್ಲೇಖಿಸಿ ಫೈಲಟ್ ಕಂಟ್ರೋಲ್ ರೂಂಗೆ ಮೇಡೆ ಸಂದೇಶ ಕಳುಹಿಸಿದ್ದಾರೆ. ಅಹಮದಾಬಾದ್ ನಲ್ಲಿ ಇತ್ತೀಚಿಗೆ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತಕ್ಕೂ ಮುನ್ನ ಆ ವಿಮಾನದ ಬೋಯಿಂಗ್ 787-8 ಡ್ರೀಮ್ ಲೈನರ್ ಪೈಲಟ್ ‘ಮೇಡೆ’ (Myday) ಸಂದೇಶ ಕಳುಹಿಸಿದ್ದರು.ಅದಾದ ಕೆಲವೇ ಸೆಕೆಂಡುಗಳಲ್ಲಿ ವಿಮಾನ ಸುಟ್ಟು ಭಸ್ಮವಾಗಿತ್ತು.

ಗುರುವಾರ ಸಂಜೆ 4-40ಕ್ಕೆ ಗುವಾಹಟಿಯಿಂದ ಟೇಕಾಪ್ ಆದ ಇಂಡಿಗೊ ವಿಮಾನದ (6ಇ-6764) ಪೈಲಟ್, ರಾತ್ರಿ 7-45ರ ಸುಮಾರಿನಲ್ಲಿ ಚೆನ್ನೈನಲ್ಲಿ ಲ್ಯಾಂಡಿಂಗ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಮಧ್ಯದಲ್ಲಿ ಇಂಧನದ ಕೊರತೆಯಿಂದ ಪೈಲಟ್ ಮೇಡೆ  (Myday) ಸಂದೇಶ ಕಳುಹಿಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವುದಾಗಿ ತಿಳಿದುಬಂದಿದೆ.

ಈ ವಿಮಾನದಲ್ಲಿ 168 ಪ್ರಯಾಣಿಕರು, ಇಬ್ಬರು ಪೈಲಟ್ , ಐವರು ಗಗನ ಸಖಿಯರು ಸೇರಿದಂತೆ 175 ಜನರಿದ್ದರು ಎನ್ನಲಾಗಿದೆ.

ಮೇಡೆ’ ಕರೆಯನ್ನು ಸ್ವೀಕರಿಸಿದ ನಂತರ ವಿಮಾನ ನಿಲ್ದಾಣದ ಸಿಬ್ಬಂದಿಗೆ  ATC  ಸೂಚನೆ ನೀಡಿತ್ತು. ವೈದ್ಯಕೀಯ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ನಿಯೋಜಿಸಲಾಗಿತ್ತು. ವಿಮಾನವು ರಾತ್ರಿ 8.20 ಕ್ಕೆ ಲ್ಯಾಂಡ್ ಆಯಿತು ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಮೂಲಗಳು ತಿಳಿಸಿವೆ.