ಸುದ್ದಿ ಕನ್ನಡ ವಾರ್ತೆ
ಕಾಪು : ಹಿಂದೂಗಳನ್ನು ಜಾಗೃತ ಗೊಳಿಸುವುದು, ಧರ್ಮದ ಆಧಾರದ ಮೇಲೆ ಹಿಂದೂ ಸಮಾಜವನ್ನು ಸಂಘಟಿತಗೊಳಿಸಿ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದೂ ರಾಷ್ಟ್ರ ಜಾಗೃತಿ ಸಭೆಯು ಸಂಪನ್ನವಾಯಿತು. ಸಭೆಯು ದೀಪಪ್ರಜ್ವಲನೆ ಮಾಡುವ ಮೂಲಕ ಪ್ರಾರಂಭವಾಯಿತು.
“ರಾಮರಾಜ್ಯವು ನಮ್ಮ ಧ್ಯೇಯವಾಗಿದೆ !”
ಶ್ರೀ.ಚಂದ್ರಮೊಗವೀರ
ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರು
ದೇವಾಲಯಗಳ ರಕ್ಷಣೆ ಮತ್ತು ದೇವಾಲಯ ಸಂಸ್ಕೃತಿಯ ಪುನರುತ್ಥಾನಕ್ಕೆ ಪ್ರಯತ್ನಗಳು ನಡೆಯಬೇಕು. ಇಂದು ದೇಶದ ಲಕ್ಷಾಂತರ ದೇವಾಲಯಗಳು ರಾಷ್ಟ್ರೀಕರಣಗೊಂಡಿವೆ.ಅಂದರೆ ಆ ದೇವಾಲಯಗಳು ಸರ್ಕಾರದ ಅಧೀನದಲ್ಲಿವೆ. ದೇವಸ್ಥಾನದ ದೇಣಿಗೆ ಪೆಟ್ಟಿಗೆಯ ಹಣವನ್ನು ಇತರ ಪಂಗಡಗಳಿಗೆ ರಿಯಾಯಿತಿ ನೀಡಲು ಬಳಸಲಾಗುತ್ತದೆ. ಕೆಲವು ತಿಂಗಳ ಹಿಂದೆ ತಿರುಪತಿ ಬಾಲಾಜಿಯ ಪ್ರಸಾದದ ಲೋಟಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಿರುವುದು ಬೆಳಕಿಗೆ ಬಂದಿತ್ತು. ಈ ರೀತಿಯ ನಾಟಕವು ಭಕ್ತರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡುತ್ತಿದೆ.ಇಂದು ಭಾರತದಲ್ಲಿ ಹಿಂದೂಗಳು ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಸಹ ಹಿಂದೂಗಳ ಅಸ್ತಿತ್ವದ ಹೋರಾಟದ ಸಮಯವಾಗಿದೆ. ಅಲ್ಲಿನ ದೇವಸ್ಥಾನಗಳು ಸುರಕ್ಷಿತವಾಗಿಲ್ಲ, ಅಲ್ಲಿನ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪ್ರತಿಯೊಬ್ಬ ಹಿಂದೂ ಬಾಂಧವರು ನನ್ನ ಧರ್ಮ, ನನ್ನ ರಾಷ್ಟ್ರಕ್ಕೆ ಸಮಯವನ್ನು ನೀಡಬೇಕು. ಹಿಂದೂಗಳು ಧರ್ಮದ ಹಿತಾಸಕ್ತಿ, ರಾಷ್ಟ್ರದ ಹಿತದೃಷ್ಟಿಯಿಂದ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಧರ್ಮದ ಗೆಲುವು ನಿಶ್ಚಿತ. ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಗುರಿಯಾಗಿದೆ. ನಮ್ಮ ಪ್ರಯಾಣ ರಾಮಮಂದಿರದಮಾತ್ರವಲ್ಲ, ರಾಮರಾಜ್ಯದತ್ತ ! ಎಂದು ಕರೆ ನೀಡಿದರು.
ಜೀವನವನ್ನು ಆನಂದಮಯಗೊಳಿಸಲು ಆತ್ಮಬಲದ ಅವಶ್ಯಕತೆ ಇದೆ !
-ಸೌ.ಅಶ್ವಿನಿ ನಾಯಕ್, ಸನಾತನ ಸಂಸ್ಥೆ
ಸನಾತನ ಧರ್ಮವು ಅನಾದಿ, ಅನಂತ ಮತ್ತು ಅವಿನಾಶಿಯಾಗಿದೆ.ಭಗವಂತನು ಸ್ವತಃ ಸಜ್ಜನರ ರಕ್ಷಣೆಗಾಗಿ ಅವತಾರ ತಾಳುತ್ತಾನೆ.ಸನಾತನ ಧರ್ಮದ ರಕ್ಷಣೆಗಾಗಿ ತನು -ಮನ- ಧನದ ತ್ಯಾಗ ಮಾಡಬೇಕಾಗಿದೆ. ಕೇವಲ ಹಿಂದೂ ಸಂಸ್ಕೃತಿಯ ರಕ್ಷಣೆ ಮಾಡುವುದು ಮಾತ್ರ ನಮ್ಮ ಧ್ಯೇಯವಲ್ಲ, ಕಣ್ವಂತೋ ವಿಶ್ವಮಾರ್ಯಂ ಅಂದರೆ ಅಖಿಲ ವಿಶ್ವವನ್ನು ಸುಸಂಸ್ಕೃತ ಮಾಡುವೆವು ಎಂಬುವುದು ನಮ್ಮ ಪೂರ್ವಜರ ಘೋಷಣೆಯಾಗಿತ್ತು.ಅದನ್ನು ಸಾಕಾರಗೊಳಿಸುವ ಧರ್ಮ ಕರ್ತವ್ಯವನ್ನು ನಮಗೆ ನಿರ್ವಹಿಸಬೇಕಾಗಿದೆ. ಧರ್ಮಾಚರಣೆಯಿಂದ ಆತ್ಮಬಲವು ಜಾಗೃತವಾಗುತ್ತದೆ. ಆತ್ಮಬಲ ಜಾಗೃತವಾಗಿರುವ ವ್ಯಕ್ತಿಯಿಂದಲೇ ಧರ್ಮಾಧಿಷ್ಟಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವು ಪರಿಣಾಮಕಾರಿಯಾಗುತ್ತದೆ ಮತ್ತು ಭಗವಂತನ ಆಶೀರ್ವಾದವು ಲಭಿಸುತ್ತದೆ. ಭಗವಂತನ ಅಧಿಷ್ಟಾನವು ಅವನ ನಾಮಸ್ಮರಣೆಯಿಂದ ನಿರ್ಮಾಣವಾಗುತ್ತದೆ.ಕಲಿಯುಗದಲ್ಲಿ ನಾಮಸ್ಮರಣೆ ಮಾಡುವುದು ಸಾಧನೆಯಾಗಿದೆ. ನಾಮಸ್ಮರಣೆಯಿಂದ ಆತ್ಮಬಲ ಜಾಗೃತವಾಗುತ್ತದೆ.ಇದರಿಂದ ಆನಂದಮಯ ಜೀವನವನ್ನು ನಡೆಸಬಹುದು.ಎಂದು ಮಾರ್ಗದರ್ಶನ ಮಾಡಿದರು.
ಹಿಂದೂ ರಾಷ್ಟ್ರದ ಸ್ಥಾಪನೆಯು ಉಸಿರಾಗಬೇಕು !
-ಪರ್ಲಾತಾಯ ಡಾ.ಸುದರ್ಶನ ಭಾರತೀಯ
ಇವರು ಮಾತನಾಡುತ್ತಾ ಇತ್ತೀಚೆಗೆ ಪಾಶ್ಚಾತ್ಯರ ಅಂಧಾನುಕರಣೆಯಿಂದ ಮಕ್ಕಳಲ್ಲಿ ಧರ್ಮಾಚರಣೆಯ ಅಭಾವವು ಕಾಣುತ್ತಿದೆ. ದೇಶದಲ್ಲಿ ಅಳಿವಿನಂಚಿನಲ್ಲಿರುವ ದೇಶದ ಸಂಸ್ಕೃತಿಯನ್ನು ಕಾಪಾಡಲು ಹಿಂದೂ ರಾಷ್ಟ್ರದ ಅವಶ್ಯಕತೆ ಇದೆ.ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ.ನಾವು ಉಸಿರು ಉಸಿರಿನಲ್ಲಿ ಹಿಂದೂವಾಗಬೇಕು.ಹಿಂದೂ ರಾಷ್ಟ್ರ ಸ್ಥಾಪನೆಯು ಮನಸ್ಸು, ಬುದ್ದಿ ಮತ್ತು ಆತ್ಮಗಳಲ್ಲಿ ಏಕರೂಪವಾಗಬೇಕೆಂದು ಕರೆ ನೀಡಿದರು.
ಶ್ರೀ.ಶ್ರೀನಿವಾಸ ಗಾಂವಸ್ಕರ್ ಇವರು ಶಂಖನಾದ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದರು. ವೇದ ಮಂತ್ರಪಠಣದ ಮೂಲಕ ಸಭೆಯ ಪ್ರಾರಂಭವಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸೌ.ಚೇತನಾ ಮತ್ತು ಸೌ.ಜ್ಯೋತಿ ಚಂದ್ರಶೇಖರ್ ಇವರು ಮಾಡಿದರು.
ಕಾರ್ಯಕ್ರಮದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ.ಲಾಲಾಜಿ ಮೆಂಡನ್ ಇವರು ಉಪಸ್ಥಿತಿತರಿದ್ದರು.
ಸಭೆಯ ಸ್ಥಳದಲ್ಲಿ ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಫ್ಲಕ್ಸ್ ಪ್ರದರ್ಶನವನ್ನು ಹಾಕಲಾಗಿತ್ತು.