ಸುದ್ದಿ ಕನ್ನಡ ವಾರ್ತೆ

ಭಾರತದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಕೇರಳದ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ಸ್ವಾಮಿಯ ದೇವಸ್ಥಾನವು ಕೂಡ ಒಂದು.

ಈ ದೇಗುಲಕ್ಕೆ ಮಹಾ ಪ್ರಧಾನ ಅರ್ಚಕರಾಗಿ ಕರ್ನಾಟಕದ ಬೆಳ್ತಂಗಡಿ ತಾಲೂಕು ಕೊಕ್ಕಡದ ಸತ್ಯನಾರಾಯಣ ತೋ ಡತ್ತಿಲ್ಲಾಯ (45) ರವರು ನೇಮಕಗೊಂಡಿದ್ದಾರೆ.

ಮಹಾ ಪ್ರಧಾನ ಅರ್ಚಕರೆಂದು ಅವರಿಗೆ ಸಂಸ್ಥಾನದಿಂದ ನೀಡುವ ಕೊಡೆ ಮರ್ಯಾದೆ ಇರುವ ವಿಶೇಷ ಸ್ಥಾನ. ಈ ಸ್ಥಾನವನ್ನು ಅವರಿಗೆ ಅತಿ ಸಣ್ಣ ವಯಸ್ಸಿನಲ್ಲಿ ಪಡೆದವರು ಇವರಾಗಿದ್ದಾರೆ. ಅರ್ಚಕರಾಗಿ ಸೇರಿದ ಅರೆ ತಿಂಗಳಲ್ಲಿ ಅವರಿಗೆ ಈ ಭಾಗ್ಯ ಲಭಿಸಿದೆ.