ಸುದ್ದಿ ಕನ್ನಡ ವಾರ್ತೆ
ರಬಕವಿ-ಬನಹಟ್ಟಿ : ಕನ್ನಡ ಚಿತ್ರ ರಂಗದಲ್ಲಿ ವಿಭಿನ್ನವಾದ ಪಾತ್ರಗಳನ್ನು ಮಾಡಿ ಜನಾನುರಾಗಿಯಾಗಿರುವ ಒಡಲಾಳದ ಸಾಕವ್ವ ತೇರದಾಳ ಮತಕ್ಷೇತ್ರದ ಮಾಜಿ ಶಾಸಕಿ, ಕರ್ನಾಟಕ ಸರಕಾರದ ಮಾಜಿ ಸಚಿವೆ ಹಾಗೂ ಹಾಲಿ ವಿಧಾನಪರಿಷತ ಸದಸ್ಯೆ ಉಮಾಶ್ರೀ ಅವರಿಗೆ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಈ ಬಾರಿ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ರಂಗಭೂಮಿ, ಕಲೆ ಮತ್ತು ಸಮಾಜ ಸೇವೆ ವಿಭಾಗದಲ್ಲಿ ಸಾಧನೆಗೈದ ನಟಿ ಉಮಾಶ್ರೀ ಅವರಿಗೆ ಸೆ.೬ ರಂದು ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುವ ಘಟಿಕೋತ್ವವ ಕಾರ್ಯಕ್ರಮದಲ್ಲಿ ಅವರಿಗೆ ಪ್ರಧಾನ ಮಾಡಲಾಗುತ್ತಿದೆ. ಕಳೇದ ತಿಂಗಳು ಅವರಿಗೆ ಜೀವಮಾನದ ಸಾಧನೆಗಾಗಿ ನಾಟಕ ಅಕಾಡೆಮಿಯ ಪ್ರಶಸ್ತಿ ಕೂಡಾ ಲಭಿಸಿತ್ತು.
ರಂಗಾಯಣ ರಂಗಭೂಮಿಯಲ್ಲಿ ದೇವನೂರು ಮಹಾದೇವ ರಚಿಸಿದ `ಒಡಲಾಳ’ ನಾಟಕದಲ್ಲಿ ಸಾಕವ್ವಳಾಗಿ ಅಪ್ರತಿಮ ನಟನೆ ಮಾಡುವದರ ಮೂಲಕ ಪಾತ್ರಕ್ಕೆ ಜೀವ ತುಂಬಿದ ಖ್ಯಾತಿಯಿಂದಾಗಿ ಇಡೀ ರಾಜ್ಯದ ಮೂಲೆ ಮೂಲೆಗೂ ಉಮಾಶ್ರೀಯವರ ಹೆಸರು ಪಸರಿಸುವಂತಾಯಿತು. ಅಲ್ಲದೆ ಈ ಪಾತ್ರವು ಉಮಾಶ್ರೀಯವರಿಗೆ ಒಂದು ಪಾಠವಾಗಿಯೂ ಪರಿಣಮಿಸಿ ಇಂದು ಮನೆಮಾತಾಗಿರುವ ಉಮಾಶ್ರೀ ನಿಜಕ್ಕೂ ಅಪ್ರತಿಮ ಹೋರಾಟಗಾರ್ತಿ.
ಜೀವನ :
ಮೂಲತಃ ತುಮಕೂರ ಜಿಲ್ಲೆಯ ನೊನವಿನಕೆರೆ ಗ್ರಾಮದಲ್ಲಿ ಮೇ ೧೦, ೧೯೫೭ ರಂದು ಡಿ. ಮುನಿನರಸಪ್ಪ ಮತ್ತು ರೇವಮ್ಮರ ಪುತ್ರಿಯಾಗಿ ಜನಿಸಿದ ಇವರಿಗೆ ಇಬ್ಬರು ಮಕ್ಕಳು ಮೊದಲನೆಯವರು, ಡಾ. ಗಾಯತ್ರಿ ರಮೇಶ ಎರಡನೆಯವರು ವಿಜಯಕುಮಾರ ಎಸ್. ನ್ಯಾಯವಾದಿ.
ರಂಗಾಯಣದಲ್ಲಿ ೩೫ವರ್ಷಗಳ ಅನುಭವವಿರುವ ಇವರು, ಕಲಾದೇವಿಯ ಆರಾಧಕರು, ಇವರು, ಬಿ.ವಿ. ಕಾರಂತ, ಗಿರೀಶ ಕಾರ್ನಾಡ, ಸಿ. ಜಿ. ಕೃಷ್ಣಸ್ವಾಮಿ, ಆರ್. ನಾಗೇಶ, ಟಿ. ಎಸ್. ನಾಗಾಭರಣ ಮುಂತಾದ ಪ್ರಸಿದ್ದ ನಿರ್ದೇಶಕರ ಕೆಳಗೆ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ರಂಗಸAಪದದ ಸಕ್ರಿಯ ಸದಸ್ಯೆಯಾಗಿರುವ ಈಕೆ ೧೦೦ಕ್ಕೂ ಹೆಚ್ಚೂ ವಿವಿಧ ಪಾತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ೬೦೦೦ಕ್ಕೂ ಹೆಚ್ಚು ಪ್ರಧರ್ಶನಗಳನ್ನು ನೀಡಿದ್ದಾರೆ. ಇದರ ಜೊತೆ ಚಿತ್ರರಂಗದ ನಂಟನ್ನು ಬೆಳೆಸಿಕೊಂಡ ಇವರು ಸದ್ಯ ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಅಮೋಘ ಅಭಿನಯಕ್ಕಾಗಿ ೧೯೯೯-೨೦೦೦ದಲ್ಲಿ ಬಂಗಾರದ ಪದಕದೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೬ ಸಲ ಅತ್ಯೂತ್ತಮ ಸಹಾಯಕ ನಟಿ ಬಿರುದು, ಗುಲಾಭಿ ಟಾಕೀಜ್ ಚಿತ್ರಕ್ಕೆ ಅಂತರಾಷ್ಟಿçÃಯ ಪ್ರಶಸ್ತಿ, ಜೊತೆಗೆ ಹಲವಾರು ರಾಷ್ಟಿçÃಯ ಪ್ರಶಸ್ತಿ, ಅಲ್ಲದೇ ಟೀವಿ ಮಾಧ್ಯಮದಲ್ಲೂ ತಮ್ಮ ಅತ್ಯೂತ್ತಮ ಅಭಿನಯದ ಮೂಲಕ ಪ್ರಶಸ್ತಿ ಮತ್ತು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಿನಿಮಾದೊಂದಿಗೆ ತಮ್ಮ ರಾಜಕೀಯ ನಂಟನ್ನು ಬೆಳೆಸಿಕೊಂಡ ಇವರು ಹಂತ ಹಂತವಾಗಿ ಬೆಳೆಯುತ್ತಾ ಬಂದವರು, ಕೆಪಿಸಿಸಿ ಸದಸ್ಯೆಯಾಗಿ, ಪ್ರಧಾನಕಾರ್ಯದರ್ಶಿಯಾಗಿ, ಎಐಸಿಸಿ ಸದಸ್ಯೆಯಾಗಿ, ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಾ ಕಾಂಗ್ರೆಸ್‌ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದವರು. ತೇರದಾಳ ಮತಕ್ಷೇತ್ರದ ಶಾಸಕಿ ಯಾಗುವುದರ ಜೊತೆಗೆ ಸಿದ್ರಾಮಯ್ಯನವರ ಮಂತ್ರಿ ಮಂಡಲದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಕೆಲಸ ಮಾಡಿದ್ದಾರೆ. ಸಧ್ಯ ವಿಧಾನಪರಿಷತ್ತ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು. ಬದುಕಿಗಾಗಿ ಕಲೆಯನ್ನು ಅನಿವಾರ್ಯವಾಗಿ ಅಪ್ಪಿಕೊಂಡ ಉಮಾಶ್ರೀ ಅದಕ್ಕೆ ತೋರಿದ ನಿಷ್ಠೆ ಮಾತ್ರ ಅನನ್ಯವಾದದ್ದು. ಉಮಾಶ್ರೀ ತಮ್ಮ ಪಾತ್ರಕ್ಕೆ ನೀಡುವ ಹೊಳಪು ನೆನಪಲ್ಲಿ ಉಳಿಯುವಂತದ್ದು. ಕಷ್ಟಗಳ ಕೋಟಲೆಗಳಲ್ಲಿ ಬೆಳೆದು ಬಂದ ‘ಉಮಾಶ್ರೀ’ ತನ್ನ ದಿಟ್ಟತನದಿಂದ ಚಿತ್ರರಂಗದ ಬದುಕನ್ನು ಉನ್ನತ ಸಾಧನೆಯವರೆಗೆ ನಡೆಸಿರುವ ರೀತಿ ಮೆಚ್ಚುವಂತದ್ದು.
ರಾಜ್ಯಶಾಸ್ತçದಲ್ಲಿ ಎಂ. ಎ. ಪದವಿಯನ್ನು ಪೂರೈಸಿರುವ ಉಮಾಶ್ರೀ ರಾಜ್ಯ, ರಾಷ್ಟç ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಈಗ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಅದರಲ್ಲೂ ತೇರದಾಳ ಮತಕ್ಷೇತ್ರದ ಜನತೆ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.