ಸುದ್ದಿ ಕನ್ನಡ ವಾರ್ತೆ
ಬೆಂಗಳೂರು; ಕರ್ನಾಟಕ ರಾಜ್ಯ ಸರ್ಕಾರದ ಗ್ರಹ ಜ್ಯೋತಿ ಫಲಾನುಭವಿಗಳ ದಾಖಲಾತಿ ಪರಿಶೀಲನೆ ಮಾಹಿತಿ ಸಂಗ್ರಹ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿದೆ.

 

ಮೀಟರ್ ರೀಡರ್ ಗಳು ಕೆಲವೆಡೆ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುತ್ತಿದ್ದರು ಕೂಡ ಇದುವರೆಗೂ ಶೇಕಡ 50ರಷ್ಟು ಕುಟುಂಬಗಳ ಮಾಹಿತಿ ಮಾತ್ರ ಸಂಗ್ರಹವಾಗಿದೆ ಎನ್ನಲಾಗಿದೆ. ಶ್ರೀಮಂತರ ಅಸಹಕಾರ ಮತ್ತು ಕೆಲ ಅಪಾರ್ಟ್ಮೆಂಟ್ಗಳಲ್ಲಿ ಪ್ರವೇಶ ಸಿಗದಿರುವುದು ವಿದ್ಯುತ್ ಇಲಾಖೆ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕ ರಾಜ್ಯದಲ್ಲಿ ಒಟ್ಟು 1.65 ಕೋಟಿ ಗ್ರಹ ಜ್ಯೋತಿ ಫಲಾನುಭವಿಗಳಿದ್ದಾರೆ. ಆದರೆ ಈ ಪೈಕಿ ಕೇವಲ 84 ಲಕ್ಷ ಕುಟುಂಬಗಳ ದಾಖಲಾತಿ ಪರಿಶೀಲನೆ ಮಾತ್ರ ಮುಗಿದಿದೆ ಎನ್ನಲಾಗಿದೆ.

ಕೆಲವರಂತೂ ನಾವು ಈಗಾಗಲೇ ಗ್ರಹ ಜ್ಯೋತಿ ಯೋಜನೆಗೆ ನೊಂದಣಿ ಮಾಡಿಸಿದ್ದೇವೆ ಮತ್ತೆ ಮತ್ತೆ ಯಾಕೆ ಮಾಡಬೇಕು ಪ್ಯಾನ್ ಕಾರ್ಡ್ ಯಾಕೆ ನೀಡಬೇಕು ಎಂದು ಹಲವರು ವಿದ್ಯುತ್ ಇಲಾಖೆ ಸಿಬ್ಬಂದಿಗಳೊಂದಿಗೆ ಭಾಗವಾದಕ್ಕೆ ಇಳಿಯುತ್ತಿದ್ದಾರೆ ಎನ್ನಲಾಗಿದೆ. ಒಬ್ಬ ಮೀಟರ್ ರೀಡರ್ ಗೆ ದಿನಕ್ಕೆ 75 ಮನೆಗಳ ಗುರಿ ನೀಡಲಾಗಿದ್ದರು ವಾಸ್ತವದಲ್ಲಿ 40 ರಿಂದ 50 ಮನೆಗಳ ಸರ್ವೆ ಮಾಡುವುದೇ ಕಷ್ಟವಾಗಿ ಪರಿಣಮಿಸಿದೆ.

 

ತಿಂಗಳಿಗೆ ಎರಡು ನೂರು ಯೂನಿಟ್ ವರೆಗೆ ವಿದ್ಯುತ್ ಬಳಕೆ ಉಚಿತ ಸೌಲಭ್ಯ ನೀಡಲಾಗುತ್ತಿದೆ ಆದರೆ ಈ ಯೋಜನೆ ಪರಿಶೀಲನೆ ವೇಳೆ ಆಧಾರ್ ಕಾರ್ಡ್ ಮತದಾರರ ಗುರುತಿನ ಚೀಟಿ ಬಾಡಿಗೆ ಕರಾರ ಪತ್ರ ಹಾಗೂ ವಿದ್ಯುತ್ ಬಿಲ್ ನೀಡುವುದು ಕಡ್ಡಾಯವಾಗಿದೆ. ಕರ್ನಾಟಕ ರಾಜ್ಯದಲ್ಲಿ ಮತದಾನದ ಹಕ್ಕು ಹೊಂದಿಲ್ಲದವರು ಹಾಗೂ ಆದಾಯ ತೆರಿಗೆ ಪಾವತಿದಾರರನ್ನು ಯೋಜನೆಯಿಂದ ಕೈಬಿಡುವ ಸಾಧ್ಯತೆಯಿದ್ದು ಇದು ಗ್ರಾಹಕರಲ್ಲಿ ಆತಂಕ ಹೆಚ್ಚಿಸಿದೆ.