ಸುದ್ಧಿಕನ್ನಡ ವಾರ್ತೆ
ಪುತ್ತೂರು: ಬೈಕ್ ನಲ್ಲಿ ಬರುವಾಗ ಬಿದ್ದು ಗಾಯಗೊಂಡಿದ್ದ ದೇವಸ್ಥಾನದ ಅರ್ಚಕರಿಗೆ ಸಮೀಪದ ಮಸೀದಿಗೆ ತರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಅಪಚರಿಸಿದ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದಿದೆ.

ಪುತ್ತೂರಿನ ನೆಟ್ಟಣಿಗೆ ಗ್ರಾಮದ ಮುಂಡ್ಯ ಎಂಬಲ್ಲಿ ಶಾಸ್ತಾರ ದೇವಸ್ಥಾನದಲ್ಲಿ ಅರ್ಚಕರಾಗಿದ್ದ ರಘುರಾಮ ಭಟ್ ರವರು ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಕುಂಬ್ರ ಮಸೀದಿಯ ಬಳಿಯ ಹೆದ್ದಾರಿಯಲ್ಲಿ ಬಿದ್ದು ಗಾಯಗೊಂಡಿದ್ದರು. ಕಾಲಿಗೆ ಗಾಯವಾಗಿ ರಸ್ತಸ್ರಾವವಾಗುತ್ತಿದ್ದ ಅವರನ್ನು ಹತ್ತಿರದಲ್ಲಿಯೇ ಇದ್ದ ಮಸೀದಿಯವರು ಮಸೀದಿಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ.

ನಂತರ ರಿಕ್ಷಾ ಚಾಲಕ ಬಶೀರ್ ಎಂಬುವರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅರ್ಚಕರಿಗೆ ಚಿಕಿತ್ಸೆಗೆ ಕೂಡ ನೆರವಾಗಿದ್ದಾರೆ.
ಈ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.