ಸುದ್ದಿ ಕನ್ನಡ ವಾರ್ತೆ
ಬೆಂಗಳೂರು, 22 ಸೆಪ್ಟೆಂಬರ್ 2025: ನವರಾತ್ರಿಯ ಶುಭ ದಿನದಂದು ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಮಹಿಳಾ ಶಾಖೆಯು ಕೆಂಗೇರಿ ಉಪನಗರದ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಭವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕರಾದ ಶ್ರೀ ಚಂದ್ರ ಮೊಗವೀರ್, ಶರತ್ ಕುಮಾರ್, ರಣರಾಗಿಣಿ ಜಿಲ್ಲಾ ಸಂಯೋಜಕರಾದ ಸೌ. ಭವ್ಯ ಮೋಹನ ಗೌಡ, ವರಸಿದ್ಧಿ ವಿನಾಯಕ ದೇವಾಲಯದ ಅಧ್ಯಕ್ಷರಾದ ಶ್ರೀ ಕದ್ರಪ್ಪ, ಹಾಗೂ ಶಾಖೆಯ ಸೇವಕರಾದ ಸೌ. ಸೌಮ್ಯ ಗೌಡ ಮತ್ತು ಸೌ. ಲಕ್ಷ್ಮಿ ಉಪಸ್ಥಿತರಿದ್ದರು. 25ಕ್ಕೂ ಹೆಚ್ಚು ರಣರಾಗಿಣಿ ಮಹಿಳಾ ಶಾಖೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸೌ. ಭವ್ಯ ಮೋಹನ ಗೌಡ ಅವರು ಹೀಗೆ ಹೇಳಿದರು:
ಹಿಂದೂ ಜನಜಾಗೃತಿ ಸಮಿತಿಯು ನವರಾತ್ರಿಯ ಶುಭದಿನದಂದು ಸ್ಥಾಪಿತವಾಗಿ, ಕಳೆದ 23 ವರ್ಷಗಳಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ನಿರಂತರ ಕಾರ್ಯನಿರ್ವಹಿಸುತ್ತಿದೆ.
ಇದುವರೆಗೆ 200 ಹಿಂದೂ ರಾಷ್ಟ್ರ ಅಧಿವೇಶನಗಳು, 2250 ಹಿಂದೂ ರಾಷ್ಟ್ರ ಸಭೆಗಳು, ಹಾಗೂ 1000ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ಒಕ್ಕೂಟದ ಮೂಲಕ 25 ಲಕ್ಷ ಹಿಂದೂ ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಲಾಗಿದೆ.
300ಕ್ಕೂ ಅಧಿಕ ಧರ್ಮಶಿಕ್ಷಣ ವರ್ಗಗಳ ಮೂಲಕ ಸಾವಿರಾರು ಜನರಿಗೆ ಹಿಂದೂ ಧರ್ಮದ ಶಿಕ್ಷಣ ನೀಡಲಾಗಿದೆ.
ಮಹಿಳೆಯರ ರಕ್ಷಣೆಗೆ ಸ್ವಸಂರಕ್ಷಣೆ ವರ್ಗಗಳು, ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನಗಳು, ಹಾಗೂ ಸಮಾಜದ ಅನಿಷ್ಠಗಳಾದ ಅಶ್ಲೀಲತೆ ವಿರುದ್ಧ ಹೋರಾಟಗಳು ನಡೆಸಲ್ಪಟ್ಟಿವೆ.
ಅವರು ಮುಂದುವರಿದು, ರಣರಾಗಿಣಿ ಮಹಿಳಾ ಶಾಖೆಯು ಇನ್ನು ಮುಂದೆ ನಗರದಲ್ಲಿ ಇನ್ನಷ್ಟು ಕಾರ್ಯಗಳನ್ನು ವಿಸ್ತರಿಸಿ ಧರ್ಮರಕ್ಷಣೆಗೆ ಶ್ರಮಿಸುತ್ತದೆ ಎಂದು ಕರೆ ನೀಡಿದರು.