ಸುದ್ದಿ ಕನ್ನಡ ವಾರ್ತೆ
ತೀರ್ಥಹಳ್ಳಿ: ತಾಲೂಕಿನ ದೇವಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಂಗ್ಲಾದಿಯಲ್ಲಿರುವ ರಘು ಪೂಜಾರಿಯವರ ಮನೆ ಹಾಗೂ ಕೊಟ್ಟಿಗೆ ಮೇಲೆ ಕಳೆದ ಮೂರು-ನಾಲ್ಕು ದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಪುಷ್ಯ ಮಳೆಯ ಅಬ್ಬರಕ್ಕೆ ಬೃಹದಾಕಾರದ ತೆಂಗಿನ ಮರ ಹಾಗೂ ಗೋಳಿ ಮರವೊಂದು ಏಕಕಾಲದಲ್ಲಿ ಗಾಳಿ ರಭಸಕ್ಕೆ ಶನಿವಾರ ರಾತ್ರಿ ಮನೆ ಮತ್ತು ಕೊಟ್ಟಿಗೆ ಮೇಲೆ ಬಿದ್ದಿದೆ.
ಕೊಟ್ಟಿಗೆ ಹಂಚುಗಳು ಪುಡಿ ಪುಡಿಯಾಗಿದೆ. ಕೊಟ್ಟಿಗೆಯಲ್ಲಿದ್ದ ದನಗಳಿಗೆ ಪೆಟ್ಟಾಗಿದ್ದು ಮನೆಯಲ್ಲಿದ್ದವರಿಗೆ ಯಾವುದೇ ರೀತಿಯ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ದೇವಂಗಿ ಗ್ರಾಮ ಪಂಚಾಯತಿ ಪಿಡಿಒ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಗ್ರಾಮಸ್ಥರು ಎಲ್ಲರೂ ಸೇರಿ ಮನೆ ಮತ್ತು ಕೊಟ್ಟಿಗೆ ಮೇಲೆ ಬಿದ್ದ ಮರವನ್ನು ತೆರವಿಗೊಳಿಸಿದ್ದಾರೆ