ಸುದ್ದಿ ಕನ್ನಡ ವಾರ್ತೆ
ಹೊಳಲ್ಕೆರೆ : ಅರೆಮಲ್ನಾಡಿನ ಐತಿಹಾಸಿಕ ಗಣಪ ನಗರಿಯಾದ ಹೊಳಲ್ಕೆರೆಯಲ್ಲಿ ೧೭ ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಂವಿಧಾನ ಸೌಧ ಆವರಣದ ಡಾ.ಡಿ.ಎಂ.ನAಜುAಡಪ್ಪ ಸಭಾಂಗಣದಲ್ಲಿ ಗುರುವಾರ ಮತ್ತು ಶುಕ್ರವಾರÀ ಅದ್ಧೂರಿಯಾಗಿ ಆಯೋಜಿಸಿದ್ದು, ತಾಲೂಕಿನ ಕನ್ನಡದ ಆಭಿಮಾನಿಗಳು, ಸಂಘ ಸಂಸ್ಥೆಗಳು ಪಟ್ಟಣವನ್ನು ತಳಿರುತೋರಣ ಹಾಗೂ ಕನ್ನಡ ಭಾವುಟಗಳನ್ನು ಸ್ವ್ವಪ್ರೇರಿತವಾಗಿ ಹಾಕಿಕೊಳ್ಳುವ ಮೂಲಕ ಪಟ್ಟಣವನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಸಾಹಿತ್ಯ ಜಾತ್ರೆಗೆ ಸಿದ್ದತೆ ಕೈಗೊಂಡಿದೆ.
೨ನೇ ಭಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಅರೆಮಲ್ನಾಡಿನಲ್ಲಿ ಇದು ೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವಾಗಿದೆ. ಈ ಮೊದಲು ೨೦೧೯ ನೇ ಸಾಲಿನಲ್ಲಿ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪಟ್ಟಣದ ಡಾ.ಬಿ.ಆರ್.ಆಂಬೇಡ್ಕರ್ ಬಯಲು ರಂಗ ಮಂದಿರದಲ್ಲಿ ನಡೆಸಲಾಗಿತ್ತು. ಅಂದು ಅದ್ಧೂರಿಯಾಗಿ ಕೈಗೊಂಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಲರವದÀ ನೆನಪು ಇನ್ನೂ ಹಚ್ಚಹಸಿರು ಇನ್ನುವ ಮೊದಲೆ ೨ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮಳನವನ್ನು ಅದ್ದೂರಿಯಾಗಿ ಆಯೋಜಿಸಿರುವುದು ಜನರಲ್ಲಿ ಪುಳಕ ತಂದಿದೆ.
ಕನ್ನಡ ಪ್ರಚಾರ ರಥ : ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಈ ಬಾರಿ ಕನ್ನಡ ರಥವನ್ನು ನಿರ್ಮಿಸಲಾಗಿದ್ದು, ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ, ತಹಸೀಲ್ದಾರ್ ಬೀಬಿ ಫಾತೀಮಾ ಚಾಲನೆ ನೀಡಿದ್ದು, ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಿದೆ. ತಾಲ್ಲೂಕು ಕೇಂದ್ರದಿAದ ಆರಂಭವಾದ ಈ ರಥವು ಹೋಬಳಿ ಕೇಂದ್ರ ಮತ್ತು ಪ್ರಮುಖ ಗ್ರಾಮಗಳಲ್ಲಿ ಸಂಚರಿಸಿದೆ. ಆಯಾ ಗ್ರಾಪಂ ಜನಪ್ರತಿನಿಧಿಗಳು ಈ ರಥ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ರಾರಾಜಿಸುತ್ತಿರುವ ಕನ್ನಡದ ಧ್ವಜಗಳು : ಪಟ್ಟಣದ ಗಣಪತಿ ಸರಕಲ್, ಬಸ್ ನಿಲ್ದಾಣ, ಗಣಪತಿ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಕನ್ನಡದ ಬಾವುಟಗಳು, ಫ್ಲೆಕ್ಸ್, ಬಂಟಿಗ್ಸ್ಗಳನ್ನು ಅಳವಡಿಸಲಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ನಾಲ್ಕು ದಿಕ್ಕುಗಳಲ್ಲಿ ಅಳವಡಿಸಿ ಸಮ್ಮೇಳನಕ್ಕೆ ಬರುವ ಕನ್ನಡದ ಮನಸ್ಸುಗಳನ್ನು ಸ್ವಾಗತಿಸಲಾಗಿದೆ. . ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನೆಡೆಯುವ ಸಂವಿಧಾನ ಸೌಧದ ಮುಂಭಾಗ ಮತ್ತು ಒಳಾಂಗಣದಲ್ಲಿ ನಾನಾ ರೀತಿಯ ವಿದ್ಯುತ್ ಅಲಂಕಾರ ಕೈಗೊಳ್ಳಲಾಗಿದೆ.
೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ. ಜಿ.ಪರಮೇಶ್ವರಪ್ಪನವರ ಸಮ್ಮೇಳನಾಧ್ಯಕ್ಷತೆಯಲ್ಲಿ ನೆಡೆಯಲಿದ್ದು, ವಿವಿಧ ಗೋಷ್ಠಿಗಳು, ಚರ್ಚೆಗಳು, ವಿರ್ಮಶೆಗಳು, ಕನ್ನಡ ಪರವಾದ ಜಯಘೋಷಗಳು ಜರುಗಲಿವೆ. ಸಮ್ಮೇಳನದಲ್ಲಿ ನಾಡಿನ ಹೆಸರಾಂತ ಮಠಾಧೀಶರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಕವಿಗಳು, ಬರಹಗಾರರು, ಕನ್ನಡ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಗುರುವಾರ ಚಾಲನೆ : ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟçಧ್ವಜವನ್ನು ಶಾಸಕ. ಡಾ.ಚಂದ್ರಪ್ಪ, ಪರಿಷತ್ ಧ್ವÀ್ವಜವನ್ನು ಜಿಲ್ಲಾಧ್ಯಕ್ಷ ಶಿವಸ್ವಾಮಿ, ನಾಡಧ್ವಜ ತಾ.ಅಧ್ಯಕ್ಷ ಶಿವಮೂರ್ತಿ ಧ್ವಜಾರೋಹಣವನ್ನು ಬೆಳಗ್ಗೆ ೮.೩೦ ನೆರವೇರಿಸಿ ಚಾಲನೆ ನೀಡಲಾಗುತ್ತದೆ. ಬಳಿಕ ಅಧ್ಯಕ್ಷರ ಮೆರವಣಿಗೆ ಉದ್ಘಾಟನೆಯನ್ನು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ರಂಚಿತ ಕುಮಾರ್ ಬಂಡಾರ, ಕನ್ನಡಾಂಭೆ ಬಾವಚಿತ್ರಕ್ಕೆ ಪುರ್ಪ್ಪಾಚನೆಯನ್ನು ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ಹೆಚ್.ಆರ್.ನಾಗರತ್ನವೇದಮೂರ್ತಿ, ತಹಸೀಲ್ದಾರ್ ಬೀಬಿ ಪಾತೀಮಾ, ಪುರಸಭೆ ಮುಖ್ಯಾಧಿಕಾರಿ ರೇಣುಕ ದೇಸಾಯಿ ಮತ್ತಿತರರು ನೇರವೇರಿಸಲಿದ್ದಾರೆ.
ವೇದಿಕೆ ಉದ್ಘಾಟನೆ : ವೇದಿಕೆ ಉದ್ಘಾಟನೆ ಸಾನಿಧ್ಯವನ್ನು ಬಾಳೆಹೊಸೂರಿನ ಭಾವೈಕ್ಯತ ಮಹಾಸಂಸ್ಥಾನದ ದಿಂಗಾಲೇಶ್ವರ ಸ್ವಾಮೀಜಿ, ಪಾಡಮಟ್ಟಿ ಗುರುಬಸವ ಮಹಾ ಸ್ವಾಮಿ, ಶ್ರೀ ಕೃಷ್ಣಯಾದವಾನಂದ ಮಹಾಸ್ವಾಮಿ ವಹಿಸುವರು. ಶಾಸಕ ಡಾ.ಎಂ.ಚAದ್ರಪ್ಪ ಅಧ್ಯಕ್ಷತೆ ವಹಿಸುವರು. ಚಿತ್ರದುರ್ಗ ಜಿಲ್ಲಾ ಉಸ್ತವಾರಿ ಸಚಿವ ಡಿ.ಸುಧಾಕರ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಸಂಸದ ಗೋವಿಂದ ಎಂ.ಕಾರಜೋಳ, ಎಂಎಲ್‌ಸಿ ಕೆ.ಎಸ್.ನವೀನ್, ನಾಡೋಜ ಮಹೇಶ್ ಜೋಷಿ, ಶಾಸಕ ಗೋವಿಂದಪ್ಪ ವಿವಿಧ ಕರ‍್ಯಕ್ರಮದಲ್ಲಿ ಭಾಗವಹಿಸುವರು.
ಬಾಕ್ಸ್ : ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲೂಕಿನಾದ್ಯಂತ ಇರುವಂತ ಕನ್ನಡದ ಅಭಿಮಾನಿಗಳು ಲಕ್ಷö್ಯಂತರ ರೂ ದೇಣಿಗೆಯನ್ನು ಉದಾರವಾಗಿ ನೀಡಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ತಾಲೂಕಿನ ಅಭಿಮಾನದ ಸಂಕೇತ ಎನ್ನುವ ಉದ್ದೇಶದಿಂದ ಇಲ್ಲಿನ ಜನಪ್ರತಿನಿಧಿಗಳು, ವ್ಯಪಾರಸ್ಥರು, ಅಂಗಡಿಮುAಗಟ್ಟುಗಳ ಮಾಲಿಕರು, ಬ್ಯಾಂಕ್‌ಗಳು, ವಕೀಲರು, ರಿಯಲ್ ಎಸ್ಟೇಟ್ ಕುಳಗಳು, ಕಂದಾಯ ಇಲಾಖೆ, ಗ್ರಾಮ ಪಂಚಾಯ್ತಿ, ಶಿಕ್ಷಕರು, ಉಪನ್ಯಾಸಕರು, ಮೈನಿಂಗ್ ಕಂಪನಿಗಳು, ತಾಲೂಕಿನಲ್ಲಿರುವ ೩೬ ಇಲಾಖೆ ನೌಕರರು ಲಕ್ಷö್ಯಂತರ ದೇಣಿಗೆಯನ್ನು ಉದಾರವಾಗಿ ನೀಡಿ ಶುಭ ಕೋರಿದ್ದಾರೆ.
ಬಾಕ್ಸ್ : ಸಮ್ಮೇಳನ ಅಯೋಜಕರು ಜಿಲ್ಲೆಯಲ್ಲಿರುವ ಸಾಕಷ್ಟು ಸಾಹಿತಿಗಳನ್ನು, ಬರಗಾರರನ್ನು, ಕಲಾವಿಧರನ್ನು, ಪತ್ರಕರ್ತರನ್ನು ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದವನ್ನು ನಿರ್ಲಷ್ಯಿಸಿದ್ದಾರೆ. ಅಯೋಜಕರು ಸ್ವಾರ್ಥ ಸಾಧನೆಗೆ ಸಮ್ಮೇಳನ ಮಾಡುತ್ತಿದ್ದಾರೆ. ಹಾಗೂ ಅಜೀವ ಸದಸ್ಯರು ಸೇರಿದಂತೆ ತಾಲೂಕು ಮತ್ತು ಜಿಲ್ಲೆಯಲ್ಲಿರುವ ಪ್ರಮುಖರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ, ವಂತಿಗೆ ಕೊಟ್ಟವರಿಗೆ ಅವಕಾಶ ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.