ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪೋಳೆ ಬೀಚ್ ನಲ್ಲಿ ಶನಿವಾರ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಪಾಲಿಟೆಕ್ನಿಕಲ್ ವಿದ್ಯಾರ್ಥಿಗಳು ರಜೆಯ ಆನಂದ ಸವಿಯಲು ಗೋವಾಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವ ಸಮುದ್ರದ ನೀರಿಗೆ ಇಳಿದಾಗ ನಾಪತ್ತೆಯಾಗಿದ್ದಾನೆ ಎನ್ನಲಾಗಿದ್ದು ಈತನಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಅಂಕೋಲಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಶನಿವಾರ ಗೋವಾದಲ್ಲಿ ಬೀಚ್ ಗೆ ಬಂದಿದ್ದ ಸಂದರ್ಭದಲ್ಲಿ ಸ್ನೇಹಿತರೆಲ್ಲರೂ ಸಮುದ್ರದ ನೀರಿಗಿಳಿದಿದ್ದರು. ಆದರೆ ತೆರೆಯ ಅಬ್ಬರವನ್ನು ಅರಿಯದೆಯೇ ಮುಂದೆ ಹೋಗಿದ್ದ 19 ವರ್ಷದ ವಿದ್ಯಾರ್ಥಿಯೋರ್ವ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸ್ಥಳೀಯ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿದರು. ಕೋಸ್ಟ ಗಾರ್ಡ, ಗೋವಾ ಪೋಲಿಸ್ ಹಾಗೂ ಸ್ಥಳೀಯ ಸಹಕಾರದಲ್ಲಿ ಈ ವಿದ್ಯಾರ್ಥಿಗಾಗಿ ಶೋಧ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಪೋಳೆ ಬೀಚ್ ನಲ್ಲಿ ಜೀವರಕ್ಷಕ ದಳದ ಸಿಬ್ಬಂಧಿಗಳ ಕೊರತೆಯಿಂದಾಗಿ ಈ ಬೀಚ್ ನಲ್ಲಿ ಇಂತಹ ದುರ್ಘಟನೆಗಳು ನಡೆಯುತ್ತಿದೆ ಎಂದು ಸ್ಥಳೀಯ ಆತಂಕ ವ್ಯಕ್ತಪಡಿಸಿದ್ದಾರೆ.
