ಸುದ್ದಿಕನ್ನಡ ವಾರ್ತೆ
Goa : ಗೋವಾದಲ್ಲಿ 6 ರಿಂದ 10 ಮತ್ತು 12 ನೇ ತರಗತಿಗಳಿಗೆ ಹೊಸ ಶೈಕ್ಷಣಿಕ ವರ್ಷ ಏಪ್ರಿಲ್ 7 ರಿಂದ ಪ್ರಾರಂಭವಾಗಲಿದೆ. ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಒಪ್ಪಿಕೊಂಡು ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿದೆ.

ಮಾರ್ಚ್ 28 ರ ಶುಕ್ರವಾರ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, 6 ರಿಂದ 10 ಮತ್ತು 12 ನೇ ತರಗತಿಗಳಿಗೆ ಹೊಸ ಶೈಕ್ಷಣಿಕ ವರ್ಷವು ಏಪ್ರಿಲ್ 7 ರಿಂದ ಪ್ರಾರಂಭವಾಗಲಿದ್ದು, 1 ರಿಂದ 5 ಮತ್ತು 11 ನೇ ತರಗತಿಗಳಿಗೆ ಜೂನ್ ನಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದೆ. ಆದ್ದರಿಂದ, 6 ರಿಂದ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳು ಏಪ್ರಿಲ್ 7 ರಿಂದ ತರಗತಿಗಳಿಗೆ ಹಾಜರಾಗಬೇಕಾಗುತ್ತದೆ.

ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಗೋವಾ ಪಾತ್ರವಾಗಿದೆ. ಈ ನೀತಿಯ ಪ್ರಕಾರ, ಶಿಕ್ಷಣ ಇಲಾಖೆಯು ಈ ಶೈಕ್ಷಣಿಕ ವರ್ಷವನ್ನು 6 ರಿಂದ 10 ಮತ್ತು 12 ನೇ ತರಗತಿಗಳಿಗೆ ಏಪ್ರಿಲ್ 1 ರಿಂದ ಪ್ರಾರಂಭಿಸಲು ನಿರ್ಧರಿಸಿತ್ತು. ಕೆಲವು ಪೆÇೀಷಕರು ಈ ನಿರ್ಧಾರವನ್ನು ವಿರೋಧಿಸಿ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದರು. ಏಪ್ರಿಲ್‍ನಲ್ಲಿ ತಾಪಮಾನ ಹೆಚ್ಚಾಗಿರುತ್ತದೆ ಎಂಬ ಕಾರಣ ನೀಡಿದ್ದರು. ಕೆಲವು ಪೆÇೀಷಕರು ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಈ ಅವಧಿಯಲ್ಲಿ ಬೆಳಿಗ್ಗೆ 8 ರಿಂದ 11 ರವರೆಗೆ ಮಾತ್ರ ತರಗತಿಗಳು ನಡೆದರೆ ಏಪ್ರಿಲ್‍ನಿಂದ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂಬ ನಿಲುವನ್ನು ತೆಗೆದುಕೊಂಡಿದ್ದರು.

ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಒಪ್ಪಿಕೊಂಡು ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಜಾಗೊಳಿಸಿದೆ.