Banner Ad

ಸುದ್ದಿ ಕನ್ನಡ ವಾರ್ತೆ

ಪಣಜಿ: ಕರ್ನಾಟಕ ನೊಂದಣಿಯ ಟೆಂಪೋ ಟ್ರಾವೆಲ್ ಅಪಘಾತ ಸಂಭವಿಸಿ ಒಬ್ಬ ವ್ಯಕ್ತಿ ಸಾವನ್ನಪ್ಪಿ ಏಳು ಜನ ಗಾಯಗೊಂಡ ಘಟನೆ ಗೋವಾದ ಮಡಗಾವ್ ನಲ್ಲಿ ನಡೆದಿದೆ.

Banner Ad

ಗೋವಾದ ಮಡಗಾಂವ ಫಟೊರ್ಡಾದ ಬೈಪಾಸ್ ನಲ್ಲಿ ಟೆಂಪೊ ಟ್ರಾವೆಲ್ (ಕೆ-53, ಬಿ-9398) ನೀರಿನ ಟ್ಯಾಂಕರ್ ಗೆ ಡಿಕ್ಕಿ ಹೊಡೆದ ಪರಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿ, ಹಲವರು ಗಾಯಗೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ಏಳು ಜನರು ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಪಾಸ್ ರಸ್ತೆಯಲ್ಲಿ ಸೋಮವಾರ ಬೆಳಿಗ್ಗೆ ಟ್ಯಾಂಕರ್ ನಿಂದ ರಸ್ತೆ ಮಧ್ಯದಲ್ಲಿರುವ ಗಿಡಗಳಿಗೆ ನೀರುಹಾಕುತ್ತಿರುವಾಗ ಹಿಂಬದಿಯಿಂದ ಬಂಂದ ಟೆಂಪೊ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ.

Banner Ad