ಸುದ್ಧಿಕನ್ನಡ ವಾರ್ತೆ
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಮಹದಾಯಿ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಠೀಕಾ ಪ್ರಹಾರ ನಡೆಸಿದ್ದಾರೆ.ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಹೇಳಿಕೆ ನೀಡಿ- ಮಹದಾಯಿಯು ಕೇವಲ ಒಂದು ನದಿಯಲ್ಲಿ ಅವಳು ನಮ್ಮ ಮಹಾತಾಯಿ. ನಮ್ಮ ನೀರು ನಮಗೆ ಸಿಗುವ ವರೆಗೂ ವಿಶ್ರಾಂತಿ ಇಲ್ಲ ಎಂಬ ಹೇಳಿಕೆ ನೀಡಿದ್ದಾರೆ.

ಕೇಂದ್ರವು ಮಹದಾಯಿಯನ್ನು ಎಂದುಗೂ ಅನುಮೋದಿಸುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿಗಳ ಹೇಳಿಕೆ ಆಘಾತಕಾರಿ ಹೇಳಿಕೆಯಾಗಿದೆ. ಒಕ್ಕೂಟ ರಚನೆಯಲ್ಲಿ ರಾಜ್ಯಗಳ ನಡುವಿನ ಪರಸ್ಪರ ಗೌರವ ಮೂಲಭೂತವಾಗಿದೆ. ಇಂತಹ ಹೇಳಿಕೆಗಳು ಸ್ವೀಕಾರಾರ್ಹವಲ್ಲ ಎಂದು ಡಿಕೆಶಿ ರವರು ಗೋವಾ ಮುಖ್ಯಮಂತ್ರಿಗಳ ಹೇಳಿಕೆ ವಿರುದ್ಧ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಿಡಿ ಕಾರಿದ್ದಾರೆ.

ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ವರ್ಷಗಳಿಂದ ವಾದ ನಡೆಯುತ್ತಲೇ ಇದೆ. ಕರ್ನಾಟಕವು ಕಳಸಾ-ಬಂಡೂರಾ ನಾಲೆಯನ್ನು ನಿರ್ಮಿಸಿ ಮಹದಾಯಿ ನದಿ ನೀರು ಯೋಜನೆ ರೂಪಿಸಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ನೀಡಿರುವ ಹೇಳಿಕೆ ಆಘಾತಕಾರಿ ಹೇಳಿಕೆಯಾಗಿದೆ. ನ್ಯಾಯಮಂಡಳಿಯು 2018 ರಲ್ಲಿ ನಮಗೆ 13.42 ಟಿಎಂಸಿ ನೀರು ನೀಡಿದ್ದರೂ, ಕೇಂದ್ರವು ಕರ್ನಾಟಕದ ನ್ಯಾಯಯುತ ಪಾಲಿನೊಂದಿಗೆ ರಾಜಕೀಯ ಮಾಡುವುದು ಮುಂದುವರೆಸಿದೆ. ಬೆಳಗಾವಿ,ಧಾರವಾಡ, ಗದಗ,ಮತ್ತು ಬಾಗಲಕೋಟೆಯ 40 ಲಕ್ಷಕ್ಕೂ ಹೆಚ್ಚು ಜನರಿಗೆ ನೀರನ್ನು ನಿರಾಕರಿಸಿದೆ. ನಾನು ಕಳೆದ ಕೆಲವು ದೆಹಲಿ ಭೇಟಿಗಳಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ರವರನ್ನು ವಯಕ್ತಿಕವಾಗಿ ಭೇಟಿ ಮಾಡಿ ತಕ್ಷಣದ ಅನುಮತಿಗಾಗಿ ಒತ್ತಾಯಿಸಿದ್ದೇನೆ. ಮಹದಾಯಿಯು ನಮ್ಮ ಹೋರಾಟ,ಮತ್ತು ನಮ್ಮದು ನಮಗೆ ಸಿಗುವ ವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ.