Banner Ad

ಸುದ್ದಿಕನ್ನಡ ವಾರ್ತೆ
ಪಣಜಿ: ಗಲ್ಫ್ ದೇಶಗಳಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಇಂಧನ ಕೊರತೆಯ ವದಂತಿಗಳು ಗೋವಾದಾದ್ಯಂತ ಭೀತಿಯನ್ನು ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಲಭ್ಯವಿರುವುದಿಲ್ಲ ಎಂಬ ಭಯದಿಂದ ನಾಗರಿಕರು ಭಾರಿ ಸಂಖ್ಯೆಯಲ್ಲಿ ಪೆಟ್ರೋಲ್ ಪಂಪ್‍ಗಳಿಗೆ ಧಾವಿಸಿದ್ದು, ಇದರ ಪರಿಣಾಮವಾಗಿ ವಾರದ ಸ್ಟಾಕ್ ಕೇವಲ ಮೂರು ದಿನಗಳಲ್ಲಿ ಖಾಲಿಯಾಗಿದೆ.

 

Banner Ad

ಈ ಅನಿರೀಕ್ಷಿತ ಬೇಡಿಕೆಯಿಂದಾಗಿ ಪೆಟ್ರೋಲ್ ಪಂಪ್ ನಿರ್ವಾಹಕರ ಸಂಪೂರ್ಣ ಲೆಕ್ಕಾಚಾರ ಅಸ್ತವ್ಯಸ್ತವಾಗಿದೆ ಮತ್ತು ಉತ್ತರ ಗೋವಾದ ಹೆಚ್ಚಿನ ಪ್ರಮುಖ ಪಂಪ್‍ಗಳು ಸ್ಟಾಕ್ ಖಾಲಿಯಾಗಿವೆ, ಅವುಗಳನ್ನು ಮುಚ್ಚುವ ಪರಿಸ್ಥಿತಿ ಬಂದಿದೆ. ಪ್ರಸ್ತುತ, ಪೆಡ್ನೆ ತಾಲೂಕಿನ ಧಾರ್ಗಲ್‍ನಲ್ಲಿರುವ ಪಂಪ್‍ನಲ್ಲಿ ಮಾತ್ರ ಪೆಟ್ರೋಲ್ ಲಭ್ಯವಿದೆ ಮತ್ತು ಅಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳು ಕಂಡುಬರುತ್ತಿದೆ. ನಿನ್ನೆ ನಡೆದ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ಒಟ್ಟಾರೆ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದರು. ಪ್ರಸ್ತುತ ಜನರು ಭಯಭೀತರಾಗಿದ್ದಾರೆ.

 

ನಾಗರಿಕರು ‘ಭಯಭೀತ’ ಸ್ಥಿತಿಗೆ ತಲುಪಿದ್ದಾರೆ. ಕಲಂಗುಟ್, ಬಾಗಾ ಮತ್ತು ಮಿರಾಮಾರ್‍ನಂತಹ ಕರಾವಳಿ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನಕ್ಕಾಗಿ ವಾಹನಗಳ ಸಾಲುಗಳು ರಸ್ತೆಗಳಲ್ಲಿ ನಿಂತಿದ್ದು, ದೊಡ್ಡ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಗೋವಾ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ನರಹರ್ ಠಾಕೂರ್ ಅವರು ರಾಜ್ಯದಲ್ಲಿ ಇಂಧನದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡಿಪೆÇೀದಲ್ಲಿ ಏಳರಿಂದ ಎಂಟು ದಿನಗಳವರೆಗೆ ಸಾಕಷ್ಟು ಸ್ಟಾಕ್ ಲಭ್ಯವಿದೆ ಮತ್ತು ನಾಗರಿಕರ ದಟ್ಟಣೆಯಿಂದಾಗಿ, ಕೆಲವು ಪಂಪ್‍ಗಳಲ್ಲಿ ಸ್ಟಾಕ್ ತಾತ್ಕಾಲಿಕವಾಗಿ ಖಾಲಿಯಾಗಿದೆ.

Banner Ad