ಸುದ್ಧಿಕನ್ನಡ ವಾರ್ತೆ
ಸೋಶಿಯಲ್ ಮೀಡಿಯಾದಲ್ಲಿ ಪ್ರತಿದಿನ ಬೇರೆ ಬೇರೆ ಪ್ರಕಾರದ ವೀಡಿಯೋಗಳು ವೈರಲ್ (Viral) ಆಗುತ್ತಿರುತ್ತದೆ. ಸದ್ಯ ಇದಹದ್ದೇ ಒಂದು ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದು ಏನೆಂದರೆ ಕೊಂಕಣದ ಪ್ರಸಿದ್ಧ ಅಂಬೋಲಿ ಘಾಟ್ (Amboli Ghat) ನಲ್ಲಿ ಕರ್ನಾಟಕದ ಪ್ರಸಿಗರು ವಾಹನವೊಂದರ ಮೇಲೆ ನಿಂತು ಸ್ಟಂಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ.
ಮಳೆಗಾಲದ ಸಂದರ್ಭದಲ್ಲಿ ಅಂಬೋಲಿ ಘಾಟ್ ನಲ್ಲಿರುವ ಪ್ರಕೃತಿ ಸೌಂದರ್ಯ ಹಾಗೂ ಜಲಪಾತಗಳ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಅಂಬೋಲಿ ಘಾಟ್ ನಂತಹ ಎತ್ತರದ ಪ್ರದೇಶದಲ್ಲಿ ಕಿರಿದಾದ ರಸ್ತೆಯಲ್ಲಿ ವಾಹನ ನಿಲ್ಲಿಸಿ ವಾಹನವನ್ನೇರಿ ಸ್ಟಂಟ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ (Social Media)ವೈರಲ್ ಆಗಿದೆ. ಜೀವಕ್ಕೆ ಕುತ್ತು ತಂದುಕೊಳ್ಳುವಂತಹ ಇಂತಹ ಮೋಜು ಮಸ್ತಿ ಸರಿಯೇ..? ಇದರಿಂದಾಗಿ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದು ಮಾತ್ರವಲ್ಲದೆಯೇ ಇತರ ಪ್ರವಾಸಿಗರಿಗೂ ತೊಂದರೆಯುಂಟಾಗುವುದಿಲ್ಲವೇ ..? ಎಂಬುದು ಹಲವರ ಪ್ರಶ್ನೆಯಾಗಿದೆ.
ಸ್ಥಳೀಯರೊಬ್ಬರು ನೀಡಿರುವ ಹೇಳಿಕೆ ಅನುಸಾರ- ಇಂತಹ ಸ್ಟಂಟ್ (Stunt) ಮಾಡುವುದರಿಂದ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದು ಮಾತ್ರವಲ್ಲದೆಯೇ ಇಂತಹ ಸುಂದರ ತಾಣದಲ್ಲಿ ಇತರ ಪ್ರವಾಸಿಗರಿಗೂ ಕಿರಿ ಕಿರಿಯುಂಟಾಗುತ್ತದೆ. ಪರಿಸರದ ದೃಷ್ಠಿಯಿಂದ ಸಂವೇದನಾಶೀಲ ಸ್ಥಳ ಇದಾಗಿದೆ. ಇಂತಹ ಘಟನೆಗಳು ನಡೆಯದಂತೆ ಪೋಲಿಸರು ಕಟ್ಟೆಚ್ಚರ ವಹಿಸಬೇಕೆಂದು ಸ್ಥಳೀಯರು ಆಘ್ರಹಿಸಿದ್ದಾರೆ.
ಮೋಜುಮಸ್ತಿ ಬೇಡ…
ಕಳೆದ ವಾರದಲ್ಲಿ ಅಂಬೋಲಿ ಘಾಟ್ ನಲ್ಲಿ (Amboli Ghat) ಜಲಪಾತ ವೀಕ್ಷಣೆಗೆ ಕೊಲ್ಲಾಪುರದಿಂದ ತೆರಳಿದ್ದ ಪ್ರವಾಸಿಗರೊಬ್ಬರು ನೀರಿಗಿಳಿದ ಸಂದರ್ಭದಲ್ಲಿ ಕಾಲುಜಾರಿ 400 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಇದರಿಂದಾಗಿ ಪ್ರವಾಸಿಗರು ಇಂತಹ ಸ್ಥಳಗಳಲ್ಲಿ ತಮ್ಮ ಸುರಕ್ಷತೆಯನ್ನು ತಾವೇ ಕಾದುಕೊಳ್ಳಬೇಕಿದೆ.