ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್-ಗೋವಾ ಫೊರವರ್ಡ ಪ್ಯಾನಲ್ ಗೆದ್ದಿದೆ. ಈ ಚುನಾಣೆಯಲ್ಲಿ  NSUI  ತನ್ನ ಪ್ರತಿಸ್ಫರ್ಧಿ  ABVP ಯನ್ನು 10 ರ ಪೈಕಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಸೋಲಿಸಿದೆ.

ಕಾಂಗ್ರೇಸ್ ವಿದ್ಯಾರ್ಥಿ ಸಂಘಟನೆ  NSUI  ಗೋವಾ ಫೊರವರ್ಡ ವಿದ್ಯಾರ್ಥಿ ಸಂಘಟನೆಯ ಬೆಂಬಲ ಹೊಂದಿತ್ತು. ಈ ವಿದ್ಯಾರ್ಥಿ ಮೈತ್ರಿಕೂಟವು BJP  ವಿದ್ಯಾರ್ಥಿ ಸಂಘಟನೆ ಎಬಿವಿಪಿಯನ್ನು ದೊಡ್ಡ ಅಂತರದಿಂದ ಸೋಲಿಸಿ ಗೋವಾ ವಿಶ್ವವಿದ್ಯಾಲಯ ವಿದ್ಯಾರ್ಥಿ ಪರಿಷತ್ ನಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಈ ಮೂಲಕ ಕುಂಕಳ್ಳಿ  NSUI  ಕಾರ್ಯಕರ್ತೆ ಸಾಯಿ ದೇಸಾಯಿ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸೋಹಮ್ ರಾವುತ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಶ್ರುತಿ ಪವಾರ್ ಮಹಿಳಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.

ಈ ಚುನಾವಣೆಯನ್ನು ಡಿಸೆಂಬರ್ 16 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಚುನಾವಣಾ ದಿನದಂದು ಜಿಲ್ಲಾಪಂಚಾಯತ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿರುವುದನ್ನು ಉಲ್ಲೇಖಿಸಿ ಚುನಾವಣೆಯನ್ನು ರದ್ಧುಗೊಳಿಸಲಾಗಿತ್ತು. ಇದೀಗ ಮಂಗಳವಾರ ಈ ಚುನಾವಣೆಯನ್ನು ನಡೆಸಲಾಯಿತು.