ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಜನರು ತಮ್ಮ ಮನೆಯನ್ನು ಹೊರ ರಾಜ್ಯದವರಿಗೆ ಬಾಡಿಗೆ (rent) ನೀಡುವ ಮುನ್ನ ವೋಟರ್ ಐಡಿ, ಆಧಾರ್ ಕಾರ್ಡ, ಡ್ರೈವಿಂಗ್ ಲೈಸನ್ಸ, ಸೇರಿದಂತೆ ಅಗತ್ಯ ಕಾಗದಪತ್ರಗಳನ್ನು ಪಡೆದು ಪರಿಶೀಲನೆ ನಡೆಸಬೇಕು. ಈ ಎಲ್ಲ ಕಾಗದಪತ್ರಗಳ ನಕಲು ಪ್ರತಿಯನ್ನು ಸ್ಥಳೀಯ ಪೋಲಿಸ್ ಠಾಣೆಗೆ ಸಲ್ಲಿ ಮಾಹಿತಿ (Tenant Verification) ನೀಡಬೇಕು. ಎಂದು ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎಗ್ನಾ ಕ್ಲಿಟ್ಸ ರವರು ಸೂಚನೆ ಹೊರಡಿಸಿದ್ದಾರೆ,. ಇಷ್ಟೇ ಅಲ್ಲದೆಯೇ ರಾಷ್ಟ್ರೀಕೃತ ಬ್ಯಾಂಕ್ ಗಳು ತಮ್ಮ ಎಟಿಎಂ ಸುರಕ್ಷತೆಗಾಗಿ ಖಡ್ಡಾಯವಾಗಿ ಸುರಕ್ಷಾ ರಕ್ಷಕರನ್ನು ನೇಮಿಸಬೇಕು ಎಂಬ ಸೂಚನೆಯನ್ನೂ ನೀಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಗೋವಾ ರಾಜ್ಯದಲ್ಲಿ ಕಳ್ಳತನ,ಧರೋಡೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂತಹ ಕೃತ್ಯಗಳಲ್ಲಿ ಗೋವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಹೊರ ರಾಜ್ಯದ ಜನರು ಭಾಗಿಯಾಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯದಲ್ಲಿ ಬಾಡಿಗೆಗೆ ಮನೆ ಪಡೆಯುವವರು ಖಡ್ಡಾಯವಾಗಿ ಈ ಎಲ್ಲ ಧಾಖಲಾತಿಗಳನ್ನು ನೀಡಬೇಕು. ಈ ಎಲ್ಲ ದಾಖಲಾತಿಯ ನಕಲು ಪ್ರತಿಯನ್ನು ಮನೆ ಮಾಲೀಕರು ಸ್ಥಳೀಯ ಪೋಲಿಸ್ ಠಾಣೆಗೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ಹೊರಡಿಸಿದ್ದಾರೆ.

ಗೋವಾ ರಾಜ್ಯದಲ್ಲಿ ಈಗಾಗಲೇ ಬಾಡಿಗೆ ಮನೆಯಲ್ಲಿ ವಾಸಿಸುವವರ ದಾಖಲಾತಿಯನ್ನು ಪಡೆದು ಪರಿಶೀಲಿಸುವ ಕೆಲಸವನ್ನು  (Tenant Verification) ಗೋವಾ ರಾಜ್ಯ ಪೋಲಿಸ್  (Police) ಇಲಾಖೆಯು ಕಟ್ಟುನಿಟ್ಟಾಗಿ ಕೈಗೊಳ್ಳುತ್ತಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವ ಹೊರ ರಾಜ್ಯದ ಜನರ, ಇಡೀ ಕುಟುಂಬದ ದಾಖಲಾತಿ ಪಡೆದುಕೊಳ್ಳಲಾಗುತ್ತಿದೆ. ಒಂದು ವೇಳೆ ಪೋಲಿಸ್ ಠಾಣೆಗೆ ದಾಖಲಾತಿ ನೀಡದಿದ್ದರೆ ಅಧಿಕ ದಂಡ ವಿಧಿಸುವಿದು ಮಾತ್ರವಲ್ಲದೆಯೇ ಅಂತವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಕಾರ್ಯವನ್ನು ಗೋವಾ ಪೋಲಿಸರು ಮಾಡುತ್ತಿದ್ದಾರೆ.

ಇದೀಗ ಮನೆಯನ್ನು ಬಾಡಿಗೆಗೆ ನೀಡುವಾಗಲೇ ಈ ಎಲ್ಲ ದಾಖಲಾತಿಯನ್ನು ಖಡ್ಡಾಯವಾಗಿ ಪೋಲಿಸ್ ಠಾಣೆಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದರಿಂದ ಗೋವಾದಲ್ಲಿ ಮನೆಯನ್ನು ಬಾಡಿಗೆಗೆ ಪಡೆಯುವ ನಿಯಮ ಇನ್ನಷ್ಟು ಕಠಿಣವಾದಂತಾಗಿದೆ.