ಸುದ್ದಿ ಕನ್ನಡ ವಾರ್ತೆ
ಗೋವಾ: ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯಾಧ್ಯಕ್ಷ ಡಾ . ಸಿದ್ದಣ್ಣ ಮೇಟಿ ರವರ ತಂದೆ ಸಂಗಪ್ಪ ಮೇಟಿ ರವರು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಹಿರಿಯ ಕನ್ನಡಿಗ ಸಂಗಪ್ಪ ಮೇಟಿ ರವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದ ನಿಮಿತ್ತ ಗೋವಾದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ನಿಧನರಾಗಿದ್ದಾರೆ.

ಮೃತರ ಅಂತಿಮ ಸಂಸ್ಕಾರವು ಇಂದು (ಶುಕ್ರವಾರ) ಸಂಜೆ 5pm ಕ್ಕೆ ಮುದ್ದೆಬಿಹಾಳ ತಾಲೂಕಿನ ಅಮರಗೋಳದಲ್ಲಿ ಜರುಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Banner Ad

ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಗೋವಾ ಕನ್ನಡಿಗರು  ಶೋಕ ವ್ಯಕ್ತಪಡಿಸಿದ್ದಾರೆ.