Banner Ad

ಸುದ್ದಿ ಕನ್ನಡ ವಾರ್ತೆ

Goa:ಗೋವಾದ ಮಾಪುಸಾ ಪರ್ರಾದ ಗಣಪತಿ  ದೇವಸ್ಥಾನದ  ಪ್ರಧಾನ ಅರ್ಚಕರಾದ ಗಣೇಶ್ ಹೆಗಡೆ ಸೂರೆಮನೆ ರವರ ಸಹೋದರಿ ಚಿ ಸೌ ನಾಗರತ್ನ ರವರ ವಿವಾಹವು ಶ್ರೀಮತಿ ಶಾಂತಲಾ ಮತ್ತು ಕೇಶವ ಹೆಗಡೆ ಆಡಳ್ಳಿ ರವರ ಸುಪುತ್ರ ಚಿ ಸಂದೀಪ ರವರೊಂದಿಗೆ ರವಿವಾರ ಮಾರ್ಚ್ 8ರಂದು 11 26ಕ್ಕೆ ಸಲ್ಲುವ ವೃಷಭ ಲಗ್ನದ ಶುಭಮಹೂರ್ತದಲ್ಲಿ ಶಿರಸಿಯಲ್ಲಿರುವ ವರನ ಸ್ವಗೃಹದಲ್ಲಿ ಅದ್ದೂರಿಯಾಗಿ ನೆರವೇರಿತು.

Banner Ad

ಈ ವಿವಾಹ ಸಮಾರಂಭಕ್ಕೆ ಬಂಧು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗೋವಾದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಅರ್ಚಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾರಂಭಕ್ಕೆ ಆಗಮಿಸಿದ್ದರು.
ನೂತನ ವಧುವರರಿಗೆ ಸುದ್ದಿ ಕನ್ನಡ ವಾಹಿನಿ ಬಳಗದಿಂದ ಶುಭಾಶಯಗಳು.

Banner Ad