ಸುದ್ಧಿಕನ್ನಡ ವಾರ್ತೆ
ಪಣಜಿ: ಹೊಸ ವರ್ಷ ಸಂಭ್ರಮಿಸಲು ಗೋವಾಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಗೋವಾಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಹೊಸ ವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ, ದೇಶ ಸುಭೀಕ್ಷವಾಗಿರಲಿ ಎಂಬ ಉದ್ದೇಶವನ್ನಿಟ್ಟುಕೊಂಡು ಗೋವಾ ಕನ್ನಡ ಸಮಾಜವು ಲೋಕಕಲ್ಯಾಣಾರ್ಥವಾಗಿ ಹೊಸ ವರ್ಷಕ್ಕೆ ದೀಪನಮಸ್ಕಾರ ಕಾರ್ಯಕ್ರಮ ಆಯೋಜಿಸಿದೆ. ಗೋವಾದ ಇತಿಹಾಸದಲ್ಲಿಯೇ ಕನ್ನಡ ಸಂಘಟನೆಯೊಂದು ದೀಪನಮಸ್ಕರದಂತಹ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಇದೇ ಮೊದಲಾಗಿದೆ.

ಗೋವಾ ರಾಜ್ಯದಲ್ಲಿ ಹೊಸ ವರ್ಷ ದೈವಾರಾಧನೆಯ ಮೂಲಕ ದೇವರ ಕೃಪೆಗೆ ಪಾತ್ರರಾಗಿ ಹೊಸ ವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ದೇವರ ಆಶೀರ್ವಾದ ಪಡೆಯಲು ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಗೋವಾದಲ್ಲಿರುವ ಕನ್ನಡಿಗರು ಮತ್ತು ಗೋವನ್ನರು ಒಗ್ಗೂಡಿಸಿಕೊಂಡು ಜನವರಿ 1 ರಂದು ದೀಪ ನಮಸ್ಕಾರ(ದುರ್ಗಾರಾಧನೆ) ಕಾರ್ಯಕ್ರಮವನ್ನು ಆಯೋಜಿಸಿದೆ. ಜನವರಿ 1 ರಂದು ಸಂಜೆ 5 ಗಂಟೆಯಿಂದ ಪರ್ವರಿಯ ಆಜಾದ ಭವನದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 4.30 ರಿಂದ ರಂಗೋಲಿ ಸ್ಫರ್ಧೆ, ಭಜನೆ ಮತ್ತು ಗುಮಟಾರತಿ ಕಾರ್ಯಕ್ರಮವಿದ್ದು, ಸಂಜೆ 7.30 ಕ್ಕೆ ಮಂಗಳಾರತಿ, 8 ಗಂಟೆಗೆ ಮಹಾಪ್ರಸಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ವಿಶೇಷ ಪೂಜಾ ಕಾರ್ಯಕ್ರಮವು ಗೋವಾದಲ್ಲಿರುವ ಕನ್ನಡಿಗರು ಮತ್ತು ಗೋವನ್ನರು ಒಟ್ಟಾಗಿ ಪಾಲ್ಗೊಳ್ಳುವ ಕಾರ್ಯಕ್ರಮವಾಗಿದೆ. ಇದರಿಂದಾಗಿ ಈ ದೀಪನಮಸ್ಕಾರ ಕಾರ್ಯಕ್ರಮದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಿದೆ.

ಈ ಕಾರ್ಯಕ್ರಮಗಳಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾ ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಹಾಗೂ ಕಾರ್ಯದರ್ಶಿ ಶ್ರೀಕಾಂತ ಲೋಣಿ ಪ್ರಕಟಣೆಯಲ್ಲಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅರುಣಕುಮಾರ್(ದೂ-9890912106) ಅಥವಾ ಶ್ರೀಕಾಂತ ಲೋಣಿ( ದೂ-9226545079) ರವರನ್ನು ಸಂಪರ್ಕಿಸಬಹುದಾಗಿದೆ.