ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಮೋಡ ಘಾಟ್ ಹಲವು ಅಪಘಾತಗಳಿಂದಾಗಿ ಅಪಾಯಕಾರಿ ತಿರುವು ಹೊಂದಿದ ಘಾಟ್ ಎಂದೇ ಹೇಳಲಾಹುತ್ತದೆ. ಈ ಘಾಟ್ ನಲ್ಲಿ ಭಾರಿ ದುರ್ಘಟನೆಯೊಂದು ಅದೃಷ್ಠವಶಾತ್ ತಪ್ಪಿದತಾಗಿದೆ. ಇದರಿಂದಾಗಿ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ಖಾಸಗಿ ಬಸ್ ಪ್ರಪಾತಕ್ಕೆ ಬೀಳುವಲ್ಲಿ ಸ್ವಲ್ಪದರಲ್ಲೇ ಪಾರಾಗಿದೆ. ಇದರಿಂದಾಗಿ ಅದೃಷ್ಠವಶಾತ್ ಪ್ರವಾಸಿಗರ ಜೀವ ಉಳಿದಂತಾಗಿದೆ.

ಲಭ್ಯವಾದ ಮಾಹಿತಿಯ ಅನುಸಾರ- ಗೋವಾ ನೋಂದಣಿ ಹೊಂದಿರುವ ಖಾಸಗಿ ಬಸ್ ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಅನಮೋಡ ಘಾಟ್ ನ ಬೃಹತ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ವೇಗವಾಗಿ ರಸ್ತೆಯಿಂದ ಬದಿಗೆ ಹೋಗಿದೆ. ಇನ್ನೇನು ಭಾರಿ ಪ್ರಪಾತಕ್ಕೆ ಬೀಳುತ್ತದೆ ಎನ್ನುವಷ್ಠರಲ್ಲಿ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ ಬಸ್ ಅಲ್ಲಿಯೇ ನಿಂತಿದೆ. ಇದರಿಂದಾಗಿ ಬಸ್ ಪ್ರಪಾತಕ್ಕೆ ಬೀಳುವುದರಿಂದ ಪಾರಾಗಿ ಪ್ರವಾಸಿಗರ ಜೀವ ಉಳಿದಿದೆ.

ಈ ಘಟನೆಯಿಂದಾಗಿ ಪ್ರವಾಸಿಗರಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಸ್ ನಲ್ಲಿದ್ದ ಯಾವುದೇ ಪ್ರಯಾಣಿಕರಿಗೂ ಕೂಡ ಯಾವುದೇ ಗಾಯವಾಗಿಲ್ಲ. ಅಪಘಾತದ ನಂತರ ಕೂಡಲೆ ಪೋಲಿಸರಿಗೆ ಮಾಹಿತಿ ನೀಡಲಾಗಿದೆ. ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಮುಂದಿನ ಕಾರ್ಯ ಕೈಗೊಂಡಿದ್ದಾರೆ,

ಗೋವಾ ಬೆಳಗಾವಿ ಸಂಪರ್ಕಿಸುವ ಅನಮೋಡ ಘಾಟ್ ತಿರುವು ಅಪಾಯಕಾರಿ ತಿರುವಾಗಿದೆ. ಈ ಭಾಗದಲ್ಲಿ ಅಪಘಾತ ಸಂಭವಿಸುತ್ತಲೇ ಇರುತ್ತದೆ. ಇದರಿಂದಾಗಿ ಈ ಮಾರ್ಗದಲ್ಲಿ ಓಡಾಟ ನಡೆಸುವಾಗ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ. ಅತಿಯಾದ ವೇಗವೂ ಕೂಡ ಹಲವು ಅಪಘಾತಕ್ಕೆ ಕಾರಣವಾಗಿದೆ.