ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ರಸ್ತೆಯಲ್ಲಿ ವಿದ್ಯುತ್ ಶಾಕ್ ಹೊಡೆಯುತ್ತಿದೆ. ಹೌದು ಗೋವಾದ ರಸ್ತೆಯಲ್ಲಿ ವಿದ್ಯುತ್ ಹರಿದಾಡುತ್ತಿದೆಯೇ ಎಂಬ ಆತಂಕ ಎದುರಾಗಿದೆ. ಗೋವಾದ ಮಾಪ್ಸಾ ಮಾರುಕಟ್ಟೆಯ ಸಮೀಪ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ತುಂಡಾಗಿರುವ ಕಾರಣ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ವ್ಯಕ್ತಿಗೆ ವಿದ್ಯುತ್ ಶಾಕ್ ತಗುಲಿದೆ. ಈ ಘಟನೆಯ ನಂತರ ಎಚ್ಚೆತ್ತ ವಿದ್ಯುತ್ ಇಲಾಖೆ ಸಿಬ್ಬಂಧಿಗಳು ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು.

ಟೆಸ್ಟರ್ ಹಿಡಿದಾಗ ರಸ್ತೆಯ ಮೇಲೆ ವಿದ್ಯುತ್ ಹರಿಯುತ್ತಿರುವುದು ಕಂಡುಬಂತು. ಇದರಿಂದಾಗಿ ಜನತೆ ಆತಂಕ್ಕೊಳಗಾಗಿದ್ದಾರೆ. ಜನತೆ ರಸ್ತೆಯಲ್ಲಿ ಓಡಾಟ ನಡೆಸಲು ಕೂಡ ಆತಂಕ ಪಡುವಂತಾಗಿದೆ.

ಕಳೆದ ತೆಲ ದಿನಗಳ ಹಿಂದೆ ಇದೇ ರಸ್ತೆಯಲ್ಲಿ ಓಡಾಟ ನಡೆಸುತ್ತಿದ್ದ ಆಕಳು ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿತ್ತು. ಇದೀಗ ಮತ್ತೆ ಮಾಪ್ಸಾದಲ್ಲಿ ರಸ್ತೆಯಲ್ಲಿ ವಿದ್ಯುತ್ ಹರಿಯುತ್ತಿರುವುದು ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಗುಣಮಟ್ಟದ ಕುರಿತಂತೆ ಹಲವು ಪ್ರಶ್ನೆ ಹುಟ್ಟುಹಾಕಿದೆ. ಕನಿಷ್ಠ ದರ್ಜೆಯ ಕೇಬಲ್ ಅಳವಡಿಕೆಯೇ ಇದಕ್ಕೆ ಕಾರಣ ಎಂದು ಸ್ಥಳೀಯ ವ್ಯಾಪಾರಿಗಳು ಆರೋಪಿಸಿದ್ದಾರೆ.

ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಜನರು ಮಾರುಕಟ್ಟೆಗೆ ವಿವಿಧ ವಸ್ತುಗಳ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ ಇದೀಗ ನಡೆದಿರುವ ಘಟನೆಯು ಸುರಕ್ಷತೆಯ ಪ್ರಶ್ನೆ ಎದುರಾಗಿದೆ. ವಿದ್ಯುತ್ ಇಲಾಖೆಯು ಕೂಡಲೇ ಎಚ್ಚೆತ್ತು ದುರಸ್ತಿ ಕಾರ್ಯ ಕೈಗೊಳ್ಳಬೇಜಕು ಎಂಬುದು ಸ್ಥಳೀಯರ ಆಘ್ರಹವಾಗಿದೆ.