ಸುದ್ಧಿಕನ್ನಡ ವಾರ್ತೆ
ಪಣಜಿ: ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ಅಕ್ರಮ ಜೂಜು ಪ್ರಕರಣ ಹೆಚ್ಚುತ್ತಿದೆ. ಕಳೆದ ಸುಮಾರು 15 ದಿನಗಳಲ್ಲಿ ಇಂತಹ ಹಲವು ಪ್ರಕರಣಗಳನ್ನು ಪೋಲಿಸರು ಬೇಧಿಸಿದ್ದಾರೆ. ಗೋವಾ ಕಾರವಾರ ಗಡಿ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜು ಪ್ರಕರಣವನ್ನೂ ಪೋಲಿಸರು ಬೇಧಿಸುದ್ದರು. ಗೋವಾ ಮಡಗಾಂವ ಫಟೊರ್ಡಾದಲ್ಲಿ ಕಾರ್ಡ್ ಆಟ ಆಡುತ್ತಿದ್ದ ಮೂವರು ಶಂಕಿತರನ್ನು ಫಟೊರ್ಡಾ ಪೆÇಲೀಸರು ಬಂಧಿಸಿದ್ದಾರೆ. ಅವರಿಂದ 7540 ರೂ. ಮತ್ತು ಕಾರ್ಡ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಗಾಳಿಯಲ್ಲಿ ಕಾರ್ಡ್ ಆಟ ಆಡಲಾಗುತ್ತಿದೆ ಎಂದು ಫಟೊರ್ಡಾ ಪೆÇಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೋಲಿಸರು ಕಾರ್ಯಾಚರಣೆ ಕೈಗೊಂಡರು. ಶಂಕಿತರಾದ ಸುರೇಶ್ ನಾಯಕ್ (32), ಲಕ್ಷ್ಮಣ್ ಲಮಾಣಿ (36) ಮತ್ತು ಕಿಸರ್ ರಾಥೋಡ್ (39) ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಜೂಜಾಟ ತಡೆ ಕಾಯ್ದೆಯಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಜೂಜಾಟಕ್ಕೆ ಬಳಸಿದ್ದ ಕಾರ್ಡ್‍ಗಳು ಮತ್ತು 7540 ರೂ.ಗಳನ್ನು ಶಂಕಿತರಿಂದ ವಶಪಡಿಸಿಕೊಳ್ಳಲಾಗಿದೆ. ಬಂಧನದ ನಂತರ, ಶಂಕಿತರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಫಟೊರ್ಡಾ ಪೆÇಲೀಸ್ ಇನ್ಸ್‍ಪೆಕ್ಟರ್ ನಾಥನ್ ಅಲ್ಮೇಡಾ ಅವರ ಮಾರ್ಗದರ್ಶನದಲ್ಲಿ ಸಬ್-ಇನ್ಸ್‍ಪೆಕ್ಟರ್ ಆಶಿಶ್ ವೆಲಿಪ್ ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.