ಸುದ್ಧಿಕನ್ನಡ ವಾರ್ತೆ
ಪಣಜಿ: ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿ ಅನಮೋಡ ಘಾಟ್ ( Anamoda Ghat) ಬಳಿ ಕರ್ನಾಟಕದಿಂದ ಗೋವಾಕ್ಕೆ ಬರುತ್ತಿದ್ದ ಬೈಕ್ ಸವಾರನೋರ್ವ ಅಪಘಾತದಲ್ಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ಹೆದ್ದಾರಿಯಲ್ಲಿ ಆರ್ ಟಿ ಒ ಚೆಕ್ ಪೋಸ್ಟ ಸಮೀಪ ಬೈಕ್ (KA-65, K-1273) ಸ್ಕಿಡ್ ಆಗಿ ಅಥವಾ ಅಪರಿಚಿತ ವಾಹನ ಡಿಕ್ಕಿ ಆಗಿ ಅಪಘಾತ ಸಂಭವಿಸಿದ್ದರಿಂದ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಸಿಂಗರಗಾಂವ ಮಾಲುಂಬ ನಿವಾಸಿ ನಾಗೇಂದ್ರ ಗಾವಡೆ (26) ಮೃತ ದುರ್ದೈವಿಯಾಗಿದ್ದಾನೆ. ಶುಕ್ರವಾರ ಬೆಳಿಗ್ಗೆ ಸಿಂಗರಗಾಂವನಿಂದ ಗೋವಾಕ್ಕೆ ಬೈಕ್ ಮೂಲಕ ನಾಗೇಂದ್ರ ತೆರಳುತ್ತಿದ್ದ. ಹೆದ್ದಾರಿಯಲ್ಲಿ ಬೆಳಿಗ್ಗೆ ಮಂಜು ಹೆಚ್ಚಾಗಿದ್ದರಿಂದ ಅಪಘಾತ ಸಂಭವಿಸಿದೆ. ರಾಮನಗರ ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈತ ಕೆಲಸಕ್ಕಾಗಿ ಗೋವಾ ತೆರಳುತ್ತಿದ್ದ ಈ ಯುವಕ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ಗೋವಾದಲ್ಲಿ ಕೆಲಸ ಇದೆ ಎಂಬ ಮಾಹಿತಿಯ ನಂತರ ಬೆಳಿಗ್ಗೆ 5:30 ಕ್ಕೆ ಗೋವಾಕ್ಕೆ ತೆರಳಿದ್ದ.
ಅನ್ಮೋಡ್ ಘಾಟ್ ನ ತಿರುವಿನಲ್ಲಿ, ಭಾರೀ ಮಳೆಯಿಂದಾಗಿ ಅವರ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ಅದೇ ಸಮಯದಲ್ಲಿ, ಹಿಂದಿನಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಈತನ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿ ಸ್ಥಳದಲ್ಲೇ ಸಾವನ್ನಪ್ಪಿದ.

ಗೋವಾದ ಖಾಸಗಿ ಆಂಬ್ಯುಲೆನ್ಸ್ ಚಾಲಕನ ಸಹಾಯ
ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ರಾಮನಗರ ಪೆÇಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಶವವನ್ನು ರಾಮನಗರಕ್ಕೆ ತರಲು ಆ ಸಮಯದಲ್ಲಿ ಯಾವುದೇ ವಾಹನ ಲಭ್ಯವಿಲ್ಲದ ಕಾರಣ, ಪೆÇಲೀಸರು ಇಕ್ಕಟ್ಟಿಗೆ ಸಿಲುಕಿದರು. ಆದರೆ, ರೋಗಿಯನ್ನು ಹಾವೇರಿಗೆ ಕರೆದುಕೊಂಡು ಹೋಗಿ ಗೋವಾಕ್ಕೆ ಬರುತ್ತಿದ್ದ ಗೋವಾದ ಖಾಸಗಿ ಆಂಬ್ಯುಲೆನ್ಸ್‍ನ ಚಾಲಕ ಪರಿಸ್ಥಿತಿಯನ್ನು ಅರಿತುಕೊಂಡು ನಾಗವೇದ್ರ ಅವರನ್ನು ತಮ್ಮ ಆಂಬ್ಯುಲೆನ್ಸ್‍ನಲ್ಲಿ ರಾಮನಗರದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಪರೀಕ್ಷೆಯ ನಂತರ, ವೈದ್ಯರು ನಾಗವೇದ್ರ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಶವಪರೀಕ್ಷೆಯ ನಂತರ, ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ರಾಮನಗರ ಪೆÇಲೀಸರು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮಲಂಬಾ ಗ್ರಾಮದಲ್ಲಿ ಶೋಕ
ನಾಗೇಂದ್ರ ಅವರು ಶ್ರಮಜೀವಿ, ರೈತ ಕುಟುಂಬದಿಂದ ಬಂದವರು ಮತ್ತು ಕಠಿಣ ಕೆಲಸಗಾರರಾಗಿದ್ದರು. ಅವರಿಗೆ ಯಾವುದೇ ವ್ಯಸನಗಳಿರಲಿಲ್ಲ. ಅವರ ಉದ್ಯೋಗದಾತರು ಶುಕ್ರವಾರ ಬೆಳಿಗ್ಗೆ ಗೋವಾಕ್ಕೆ ಕೆಲಸಕ್ಕೆ ಬರುವಂತೆ ಕೇಳಿಕೊಂಡಿದ್ದರು, ಆದ್ದರಿಂದ ಅವರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ತಲುಪಲು ಬೆಳಿಗ್ಗೆ ಗೋವಾಕ್ಕೆ ತೆರಳಿದ್ದರು. ಅವರ ಆಕಸ್ಮಿಕ ಸಾವು ಮಲಂಬಾ ಗ್ರಾಮದಲ್ಲಿ ಶೋಕ ತಂದಿದೆ.