ಸುದ್ದಿಕನ್ನಡ ವಾರ್ತೆ
Goa : ಗೋವಾ ರಾಜ್ಯ ಪ್ರವಾಸೀ ಆಕರ್ಷಣೀಯ ತಾಣವಾಗಿದೆ. ಗೋವಾದಲ್ಲಿ ಪ್ರವಾಸಿಗರ ಆಕರ್ಷಣೆಗೆ ಹೊಸ ಹೊಸ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಇದೀಗ ಕೆಲವೇ ದಿನಗಳಲ್ಲಿ ಗೋವಾದಲ್ಲಿ ರೊರೊ ಬೋಟ್ ಸೇವೆ ಆರಂಭಗೊಳ್ಳಲಿದ್ದು, ಇದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ ಎಂಬ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.(Roro boat service launched in Goa).
ಬಹುನಿರೀಕ್ಷಿತ ರೋ-ರೋ ಬೋಟ್ ಸೇವೆ ಮುಂದಿನ 15 ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಸಚಿವ ಸುಭಾಷ್ ಫಳ ದೇಸಾಯಿ ಮಾಹಿತಿ ನೀಡಿದ್ದಾರೆ. ಎರಡೂ ರೋ-ರೋ ಬೋಟ್ ಗಳು ಸಂಪೂರ್ಣವಾಗಿ ಸಿದ್ಧವಾಗಿವೆ, ಪ್ರಾಯೋಗಿಕ ಪರೀಕ್ಷೆಗಳು ಮತ್ತು ಸಿಬ್ಬಂದಿ ತರಬೇತಿ ಈಗಾಗಲೇ ಪೂರ್ಣಗೊಂಡಿದೆ ಎಂಬ ಮಾಹಿತಿ ನೀಡಿದ್ದಾರೆ.
ಗೋವಾ ರಾಜ್ಯದ ಸ್ಥಳೀಯರಿಗೆ ಈ ಬೋಟ್ ಸೇವೆಯನ್ನು ಉಚಿತವಾಗಿ ಬಳಸಲು ಅನುಮತಿಸಲಾಗಿದ್ದರೂ, ಶುಲ್ಕಗಳು ಹೊರಗಿನವರಿಗೆ, ಪ್ರವಾಸಿಗರಿಗೆ ಅನ್ವಯಿಸುತ್ತವೆ ಎಂದು ಸಚಿವರು ಸ್ಪಷ್ಟಪಡಿಸಿದರು. “ನಾವು ಸ್ವಲ್ಪ ಆದಾಯ ಗಳಿಕೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಇಲಾಖೆಯ ಮೇಲಿನ ಆರ್ಥಿಕ ಒತ್ತಡವನ್ನು ಎತ್ತಿ ತೋರಿಸಿದರು. “ಪ್ರಸ್ತುತ, ನಾವು 76 ಕೋಟಿ ಖರ್ಚು ಮಾಡುತ್ತಿದ್ದೇವೆ, ಆದರೆ 52 ಲಕ್ಷ ಮಾತ್ರ ಗಳಿಸುತ್ತಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.