ಸುದ್ದಿಕನ್ನಡ ವಾರ್ತೆ
ಪಣಜಿ: ಮೇ ತಿಂಗಳ ಕೊನೆಯ ವಾರದಲ್ಲಿ ಗೋವಾ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ, ನಂತರ ಜೂನ್ ತಿಂಗಳ ಆರಂಭದಿಂದ ವಿಶ್ರಾಂತಿ ತೆಗೆದುಕೊಂಡಿತ್ತು. ಇದೀಗ ಪುನಃ ಗೋವಾದಲ್ಲಿ ಮಳೆ ಎಂಟಿಯಾಗುವ ಸಾಧ್ಯತೆಯಿದೆ. ಜೂನ್ 12 ರಿಂದ ಜೂನ್ 13 ರ ವರೆಗೆ ಗೋವಾ ರಾಜ್ಯದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಮುಂದಿನ ಒಂದು ವಾರ ಗೋವಾ ರಾಜ್ಯದಲ್ಲಿ ಮಳೆ ಸಕ್ರೀಯವಾಗಿರುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಗೋವಾ ರಾಜ್ಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಅನುಸಾರ- ಜೂನ್ 12 ರಿಂದ ಗೋವಾದಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಜೂನ್ 14 ರಿಂದ 17 ರವರೆಗೆ ರಾಜ್ಯಲ್ಲಿ ಯಲ್ಲೊ ಅಲರ್ಟ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು 30 ರಿಂದ 40 ಕಿಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗೋವಾ ಸೇರಿದಂತೆ ಮಹಾರಾಷ್ಟ್ರ ದಲ್ಲಿ ಮೇ ತಿಂಗಳ ಕೊನೆಯ ವಾರದಲ್ಲಿ ಸಕ್ರೀಯವಾಗಿದ್ದ ಮಳೆ ಜೂನ್ ತಿಂಗಳ ಮೊದಲ ವಾರದಲ್ಲಿ ವಿಶ್ರಾಂತಿ ಪಡೆದಿತ್ತು. ಇದೀಗ ಮಳೆ ಸಕ್ರೀಯವಾಗಲಿದ್ದು ಗೋವಾ ಸೇರಿದಂತೆ ಕೊಂಕಣ, ಪಶ್ಚಿಮ ಮಹಾರಾಷ್ಟ್ರದಲ್ಲಿಯೂ ರೆಡ್ ಅಲರ್ಟ ಘೋಷಿಸಲಾಗಿದೆ.