ಸುದ್ದಿ ಕನ್ನಡ ವಾರ್ತೆ

ಪಣಜಿ : ಮೇ 17 ರಿಂದ 19, 2025 ರವರೆಗೆ ಫರ್ಮಾಗುಡಿ, ಫೊಂಡಾದಲ್ಲಿನ ಗೋವಾ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯುವ “ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ”ವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೇ, ಅಂತರರಾಷ್ಟ್ರೀಯ ಮಟ್ಟದ ಆಧ್ಯಾತ್ಮಿಕ ಜಾಗೃತಿಯ ಮಹೋತ್ಸವವಾಗಲಿದೆ. ಈ ಮಹೋತ್ಸವದಲ್ಲಿ 23 ದೇಶಗಳ ಗಣ್ಯರು, ವಿವಿಧ ಪಂಥಗಳ ಸಂತರು, ದೇವಸ್ಥಾನಗಳ ಧರ್ಮಾಧಿಕಾರಿಗಳು ಮತ್ತು 25,000 ಕ್ಕಿಂತಲೂ ಹೆಚ್ಚು ಸಾಧಕರು, ಭಕ್ತರು ಭಾಗವಹಿಸಲಿದ್ದಾರೆ. ಯಜ್ಞಯಾಗಾದಿಗಳಿಂದಾಗಿ ಈ ಕಾರ್ಯಕ್ರಮವು ಕಾಶಿ, ಉಜ್ಜಯಿನಿ ಮತ್ತು ಅಯೋಧ್ಯೆಯಂತೆ ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಿ ಪರಿಗಣಿಸಲಾಗುತ್ತದೆ. ಇದರಿಂದ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ ಅವರು ಪಣಜಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

ಪಣಜಿಯ “ಹೋಟೆಲ್ ಮನೋಶಾಂತಿ”ಯಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಗೆ ಆರ್ಟ್ ಆಫ್ ಲಿವಿಂಗ್‌ನ . ಸಂತೋಷ ಘೋಡಗೆ, ಸಾಂಸ್ಕೃತಿಕ ನ್ಯಾಸದ  ಜಯಂತ ಮಿರಿಂಗ್ಕರ್, ಅಂತರರಾಷ್ಟ್ರೀಯ ಬಜರಂಗ ದಳದ  ನಿತಿನ್ ಫಳದೇಶಾಯಿ, ಕುಂಡೈ ತಪೋಭೂಮಿಯ ಪದ್ಮನಾಭ ಪಂಥದ . ಸುಜನ್ ನಾಯಕ್, ಬ್ರಾಹ್ಮಣ ಮಹಾಸಂಘದ . ರಾಜ್ ಶರ್ಮಾ, ಜಗದ್ಗುರು ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರ ಶಿಷ್ಯರಾದ . ಅನಿಲ್ ನಾಯಕ್, ಗೋಮಂತಕ ಮಂದಿರ ಮಹಾಸಂಘದ  ಜಯೇಶ ತಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ  ಯುವರಾಜ್ ಗಾವ್ಕರ್ ಅವರು ಉಪಸ್ಥಿತರಿದ್ದರು.

“ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ”ದಲ್ಲಿ ಸಾವಿರ ವರ್ಷಗಳ ಹಿಂದಿನ ಸೋರಟಿ ಸೋಮನಾಥ ಜ್ಯೋತಿರ್ಲಿಂಗದ ದರ್ಶನದ ಅಪರೂಪದ ಅವಕಾಶ ಭಕ್ತರಿಗೆ ದೊರೆಯಲಿದೆ. ಈ ಶಿವಲಿಂಗವನ್ನು ಮುಸ್ಲಿಂ ಆಕ್ರಮಣಕಾರಿಯಾದ ಗಜ್ನವಿಯ ಗಜನಿ ಧ್ವಂಸಗೊಳಿಸಿದ್ದನು. ನಂತರ ಅದನ್ನು ಅಗ್ನಿಹೋತ್ರ ಪಂಥದ ಸಾಧಕರು ಸಂರಕ್ಷಿಸಿದರು. ಈಗ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆಶೀರ್ವಾದದಿಂದ ಮೇ 17 ರಿಂದ 19 ರವರೆಗೆ ಈ ಶಿವಲಿಂಗವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುವುದು. ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಕಾಲದ ಆಯುಧಗಳ ಪ್ರದರ್ಶನವೂ ನಡೆಯಲಿದೆ.

ಕಾಶಿ ವಿಶ್ವನಾಥ್ ಕಾರಿಡಾರ್ ಮತ್ತು ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದಿಂದ ಉತ್ತರ ಪ್ರದೇಶ ರಾಜ್ಯಕ್ಕೆ ಪ್ರತಿ ವರ್ಷ ಸುಮಾರು 22,000 ಕೋಟಿ ರೂ. ಆದಾಯ ಉಂಟಾಗಿದೆ. ಇದರಿಂದಾಗಿ ಪ್ರವಾಸೋದ್ಯಮದಲ್ಲಿ 7 ನೇ ಸ್ಥಾನದಲ್ಲಿದ್ದ ಈ ರಾಜ್ಯ ಈಗ ಶ್ರೇಷ್ಠ ಸ್ಥಾನಕ್ಕೆ ಏರಿದೆ. ಇದರಿಂದ ಆಧ್ಯಾತ್ಮಿಕ ಪ್ರವಾಸೋದ್ಯಮ ರಾಜ್ಯ ಆರ್ಥಿಕತಿಗೆ ಎಷ್ಟು ಉತ್ತೇಜನ ನೀಡಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಿಂದೆ “ದಕ್ಷಿಣ ಕಾಶಿ” ಎಂದು ಪರಿಗಣಿಸಲ್ಪಟ್ಟ ಗೋವಾ ರಾಜ್ಯಕ್ಕೂ ನಿಶ್ಚಿತವಾಗಿ ಇದರ ಲಾಭವಾಗಲಿದೆ. ದೇವಸ್ಥಾನ ಅಥವಾ ಧಾರ್ಮಿಕ ಆಚರಣೆಗಳನ್ನು ಅಂಧಶ್ರದ್ಧೆ ಎಂದು ಪರಿಗಣಿಸುವವರೂ ಈ ಯುಕ್ತಿಯನ್ನು ಅರಿಯಬೇಕು – ದೇವಾಲಯಗಳು ದೇಶದ ಆರ್ಥಿಕತೆಯ ಆತ್ಮ ಮತ್ತು ಆಧಾರಸ್ತಂಭವಾಗಿವೆ. ಇಂದು ಜಾಗತಿಕ ಉದ್ಯಮ ನಗರಗಳು ನಾಶವಾಗುತ್ತಿರುವಾಗ ಉಜ್ಜಯಿನಿ, ತಿರುಪತಿ, ರಾಮೇಶ್ವರಂ, ಕಾಶಿ ಮುಂತಾದ ತೀರ್ಥಕ್ಷೇತ್ರ ನಗರಗಳು ಸಾವಿರಾರು ವರ್ಷಗಳಿಂದ ಉಳಿದಿವೆ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳೂ ಅಭಿವೃದ್ಧಿ ಹೊಂದಿವೆ.

ಶಂಖನಾದ ಮಹೋತ್ಸವದಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ : ಈ 3 ದಿನಗಳ ಮಹೋತ್ಸವಕ್ಕಾಗಿ ದೇಶ-ವಿದೇಶಗಳಿಂದ 25,000 ಕ್ಕಿಂತ ಹೆಚ್ಚು ಭಕ್ತರು, ಸಾಧಕರು, ಗಣ್ಯರು ಗೋವಾಕ್ಕೆ ಆಗಮಿಸಲಿದ್ದಾರೆ. ಅವರು ಇಲ್ಲಿ 3 ರಿಂದ 5 ದಿನಗಳವರೆಗೆ ಉಳಿದಿದ್ದು, ಪ್ರವಾಸ ಮಾಡಿ, ಸ್ಥಳೀಯ ವಾಹನಗಳು, ದೇವಸ್ಥಾನಗಳು, ಹೋಟೆಲ್, ಮಾರುಕಟ್ಟೆ, ರೆಸ್ಟೋರೆಂಟ್ ಮತ್ತು ಪ್ರವಾಸಿ ತಾಣಗಳ ಲಾಭ ಪಡೆಯಲಿದ್ದಾರೆ. ಇದರಿಂದ ಸ್ಥಳೀಯ ಉದ್ಯಮ, ಉದ್ಯೋಗಗಳಿಗೆ ಉತ್ತೇಜನ ದೊರೆಯಲಿದೆ. ಈ ಎಲ್ಲ ಚಟುವಟಿಕೆಗಳಿಂದ ಉಂಟಾಗುವ ಜಿಎಸ್ಟಿ ಮತ್ತು ಸೇವಾ ತೆರಿಗೆಗಳ ಮೂಲಕ ರಾಜ್ಯ ಸರಕಾರಕ್ಕೂ ಉತ್ತಮ ಆದಾಯ ಸಿಗಲಿದೆ.

ಈ ಮಹೋತ್ಸವವು ಭವಿಷ್ಯದ ಉಜ್ವಲ ಆಧ್ಯಾತ್ಮಿಕತೆಯ ಶಂಖನಾದ : ಇತರ ಉದ್ಯಮಗಳ ಹೋಲಿಕೆಯಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವು ಸುರಕ್ಷಿತ ಮತ್ತು ಶಾಶ್ವತ ಅಭಿವೃದ್ಧಿಗೆ ಪ್ರೇರಕವಾಗಿರುವುದರ ಜೊತೆಗೆ ಸಮಾಜದ ನೈತಿಕ ಮೌಲ್ಯಗಳ ಪುನರ್ಸ್ಥಾಪನೆಗೂ ಸಹಾಯ ಮಾಡುತ್ತದೆ. ಈ ಮಹೋತ್ಸವದ ಮೂಲಕ ದೇವಸ್ಥಾನ ಪರಂಪರೆ, ಜನಪದಕಲೆ, ಸಾಂಸ್ಕೃತಿಕ ಪರಿಚಯದೊಂದಿಗೆ ಸಾಧನೆ, ಆಧ್ಯಾತ್ಮಿಕ ಚಿಂತನೆ ಹಾಗೂ ರಾಷ್ಟ್ರಭಕ್ತಿಮಯ ಮೌಲ್ಯಗಳ ಜಾಗೃತಿ ಮೂಡಿಸಲಾಗುತ್ತದೆ. ಒಟ್ಟಾರೆ ಈ “ಶಂಖನಾದ ಮಹೋತ್ಸವ” ಭವಿಷ್ಯದ ಉಜ್ವಲ ಆಧ್ಯಾತ್ಮಿಕತೆಯ ಶಂಖನಾದವಾಗಿದೆ.