ಸುದ್ದಿಕನ್ನಡ ವಾರ್ತೆ
Goa: ಗೋವಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರು ಖಡ್ಡಾಯವಾಗಿ ಸ್ಥಳೀಯ ಪೋಲಿಸ್ ಠಾಣೆಗೆ ಅಗತ್ಯ ದಾಖಲಾತಿ ನೀಡುವುದು ಖಡ್ಡಾಯವಾಗಿದೆ. ಹೀಗೆ ದಾಖಲಾತಿ ನೀಡದ ಬಾಡಿಗೆ ಮನೆಯವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳುವ ಕಾರ್ಯವನ್ನು ಗೋವಾ ಪೋಲಿಸ್ ಇಲಾಖೆ ಕೈಗೆತ್ತಿಕೊಂಡಿದೆ.
ಗೋವಾದ ವಾಳಪೈ ಭಾಗದಲ್ಲಿ ಪೋಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ 95 ಬಾಡಿಗೆ ಕುಟುಂಬಗಳ ದಾಖಲಾತಿಯ ತಪಾಸಣೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧಗಳ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ. ಪೋಲಿಸ್ ನಿರೀಕ್ಷಕ ವಿದೇಶ ಶಿರೋಡಕರ್ ರವರ ಮಾರ್ಗದರ್ಶನದಲ್ಲಿ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ.