ಸುದ್ದಿಕನ್ನಡ ವಾರ್ತೆ
Goa : ಗೋವಾದ  ಸಂಸ್ಕೃತಿ ಶಾಂತಿಯುತವಾಗಿದೆ, ಕೆಲಸಕ್ಕಾಗಿ ಗೋವಾಕ್ಕೆ ಬರುವ ಬಿಹಾರಿಗಳು ಗೋವಾದ ಸಂಸ್ಕೃತಿ ಮತ್ತು ಅದರ ಎಲ್ಲಾ ಧರ್ಮಗಳ ಸಹಿಷ್ಣುತೆ ಮತ್ತು ಸಮಾನತೆಯ ಸಿದ್ಧಾಂತವನ್ನು ಅನುಸರಿಸಬೇಕೆಂದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಹೇಳಿದ್ದಾರೆ.
ಪಣಜಿಯಲ್ಲಿ ಬಿಹಾರ ದಿನವನ್ನು ಆಚರಿಸಲಾಯಿತು. ಆ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಿಎಂ ಸಾವಂತ್ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಶೇಠ್, ಸಂಸದ ಸದಾನಂದ ಶೇಠ್ ತಾನಾವಡೆ, ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯಕ್ ಮತ್ತಿತರರು ಉಪಸ್ಥಿತರಿದ್ದರು.(Biharis coming to Goa should follow the culture of Goa and its philosophy of tolerance and equality of all religions).

 

ಬಿಜೆಪಿಯು ಏಕ ಭಾರತ ಶ್ರೇಷ್ಠ ಭಾರತ ತತ್ವದಲ್ಲಿ ನಂಬಿಕೆ ಇಡುತ್ತದೆ. ಅನೇಕ ಬಿಹಾರಿಗಳು ಪ್ರಸ್ತುತ ಗೋವಾದಲ್ಲಿ ಕೆಲಸದ ನಿಮಿತ್ತ ವಾಸಿಸುತ್ತಿದ್ದಾರೆ. ಅವರು ಇಲ್ಲಿನ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು. ಗೋವಾದ ಜನರು ಶಾಂತಿಪ್ರಿಯರಾಗಿದ್ದು, “ಅತಿಥಿಗಳೇ ದೇವರು” ಎಂಬ ತತ್ವವನ್ನು ನಂಬುತ್ತಾರೆ, ಜಗಳವಾಡುವುದಿಲ್ಲ ಮತ್ತು ಇಲ್ಲಿಗೆ ಬರುವ ಜನರನ್ನು ಪ್ರೀತಿಸುತ್ತಾರೆ. ಬಿಹಾರದ ಮೂಲದ ಕೆಲವು ಜನರ ಎರಡನೇ ತಲೆಮಾರಿನವರು ಪ್ರಸ್ತುತ ಇಲ್ಲಿ ವಾಸಿಸುತ್ತಿದ್ದಾರೆ. ಅವರು ಗೋವಾದ ಸಂಸ್ಕೃತಿಯನ್ನು ಸ್ವೀಕರಿಸಿದ್ದಾರೆ. ಬಿಹಾರದಿಂದ ಇಲ್ಲಿಗೆ ಕೆಲಸ ಮಾಡಲು ಬರುವ ಇತರ ಜನರು ಸಹ ಗೋವಾದ ಸಂಸ್ಕೃತಿಯನ್ನು ಅನುಸರಿಸಬೇಕು ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

 

ಗೋವಾದಲ್ಲಿ ನಡೆದ ಅಪರಾಧಗಳಲ್ಲಿ ಬಿಹಾರಿ ವ್ಯಕ್ತಿಯ ಹೆಸರು ಉಲ್ಲೇಖಿಸಲ್ಪಟ್ಟರೆ ಬಿಹಾರದ ಜನರು ಇಷ್ಟಪಡುವುದಿಲ್ಲ. ಆದ್ದರಿಂದ, ಬಿಹಾರದಿಂದ ಇಲ್ಲಿಗೆ ಬರುವ ಜನರಿಗೆ ಎಲ್ಲಾ ಧರ್ಮಗಳನ್ನು ಗೌರವಿಸುವ ಮತ್ತು ಸಮಾನತೆಯನ್ನು ಗೌರವಿಸುವ ಇಲ್ಲಿನ ಶಾಂತಿಪ್ರಿಯ ಸಂಸ್ಕೃತಿಯ ಬಗ್ಗೆ ವಿವರಿಸಬೇಕು. ಕೆಲವರ ಜನ್ಮಸ್ಥಳ ಬಿಹಾರವಾದರೂ, ಗೋವಾ ಅವರ ಕೆಲಸದ ಸ್ಥಳ. ಅವರು ಗೋವಾದ ಪರಿಸರ, ಸಂಸ್ಕೃತಿ ಮತ್ತು ಜನರನ್ನು ಪ್ರೀತಿಸುತ್ತಾರೆ. ಗೋವಾದ ಪರಿಸರವನ್ನು ಸ್ವಚ್ಛ ಮತ್ತು ಸುಂದರವಾಗಿಡುವಲ್ಲಿ ಇಲ್ಲಿನ ಬಿಹಾರಿಗಳ ಕೊಡುಗೆ ಅತ್ಯಗತ್ಯ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.(Other people coming here from Bihar to work should also follow the Goan culture).

ಬಿಹಾರದ ಅಭಿವೃದ್ಧಿಗೆ ಡಬಲ್ ಎಂಜಿನ್ ಕಾರಣ

ಕೇಂದ್ರ ಮತ್ತು ಬಿಹಾರದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದಾಗಿ ಬಿಹಾರ ಅಭಿವೃದ್ಧಿ ಹೊಂದುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಹೇಳಿದರು. ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಬಿಹಾರಕ್ಕಾಗಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಅವಶ್ಯಕ ಎಂದು ಅಭಿಪ್ರಾಯಪಟ್ಟರು.