ಸುದ್ಧಿಕನ್ನಡ ವಾರ್ತೆ
Goa: ಬೆಳಗಾವಿಯಲ್ಲಿ ಕ್ಯಾಬ್ ಚಾಲಕನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಗೋವಾದ ಮಾಜಿ ಶಾಸಕ ಲವು ಮಾಮಲೇದಾರ್ ಅವರ ಬೆನ್ನಿನ ಮೇಲೆ ಗಾಯದ ಗುರುತುಗಳಿವೆ. ಆದರೆ, ಶವಪರೀಕ್ಷೆಯ ವರದಿಯಲ್ಲಿ ಬೇರೆಲ್ಲಿಯೂ ಯಾವುದೇ ಗಾಯಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ. ಅವರ ಸಾವಿಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅವರ ರಾಸಾಯನಿಕ ವಿಶ್ಲೇಷಣೆ ಮತ್ತು ಹಿಸ್ಟೋಪಾಥಾಲಜಿ ವರದಿ ಬಾಕಿ ಇದೆ. ಇದಲ್ಲದೆ, ಒಳಾಂಗಗಳನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಆ ವರದಿಯ ನಂತರ, ಮಾಮಲೇದಾರ್ ರವರ ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.

 

ವೈಯಕ್ತಿಕ ಕೆಲಸದ ನಿಮಿತ್ತ ಬೆಳಗಾವಿಗೆ ಹೋಗಿದ್ದ ಗೋವಾದ ಮಾಜಿ ಶಾಸಕ ಲವು ಮಾಮಲೇದಾರ್, ಖಡೇಬಜಾರ್-ಬೆಳಗಾವಿಯಲ್ಲಿರುವ ಶಿವಾನಂದ್ ಲಾಡ್ಜ್‍ನಲ್ಲಿ ತಂಗಿದ್ದರು. ಕಳೆದ ಶನಿವಾರ ಮಧ್ಯಾಹ್ನ ಸುಮಾರು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಕಾರು ಅವರ ಮುಂದೆ ಇದ್ದ ಕ್ಯಾಬ್‍ಗೆ ಡಿಕ್ಕಿ ಹೊಡೆದಿದೆ. ಕ್ಯಾಬ್‍ಗೆ ಯಾವುದೇ ದೊಡ್ಡ ಹಾನಿಯಾಗಿಲ್ಲ. ಆದ್ದರಿಂದ, ಮಾಮಲೇದಾರ್ ಕ್ಯಾಬ್ ಚಾಲಕನ ಬಳಿ ಕ್ಷಮೆಯಾಚಿಸಿ ಲಾಡ್ಜ್‍ಗೆ ಹೋದರು; ಆದರೆ ಕ್ಯಾಬ್ ಚಾಲಕ ಅಮೀರ್ಸುಹೇಲ್ ಸನದಿ ಲವು ಮಾಮಲೇದಾರ್ ರವರನ್ನು ಬೆನ್ನಟ್ಟಿ, ಶಿವಾನಂದ ಲಾಡ್ಜ್‍ನ ಪಾಕಿರ್ಂಗ್ ಪ್ರದೇಶದಲ್ಲಿ ಬಂದು ಮಾಮೆಲ್ದಾರ್ ಅವರನ್ನು ಹಿಡಿದು, ಅವರೊಂದಿಗೆ ಜಗಳವಾಡಲು ಪ್ರಾರಂಭಿಸಿದರು. ಇದರಲ್ಲಿ ಅಮೀರ್ ಸುಹೇಲ್ ಸನದಿ ಈತ ಲವು ಮಾಮಲೇದಾರ್ ಅವರನ್ನು ಹೊಡೆಯಲು ಪ್ರಾರಂಭಿಸಿದರು. ಲಾಡ್ಜ್ ಮಾಲೀಕರು ಮತ್ತು ಇತರರು ಕ್ಯಾಬ್ ಚಾಲಕನನ್ನು ತಡೆಯಲು ಪ್ರಯತ್ನಿಸಿದರು; ಆದರೂ ಅವನು ಹೊಡೆಯುವುದನ್ನು ಮುಂದುವರೆಸಿದ ಎನ್ನಲಾಗಿದೆ.

ಈ ಘಟನೆಯ ನಂತರ, ಮಾಮಲೇದಾರ್ ರವರು ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಕುಸಿದು ಬಿದ್ದು ಲಾಡ್ಜ್‍ನ ಮೆಟ್ಟಿಲುಗಳನ್ನು ಹತ್ತಿ ತನ್ನ ಕೋಣೆಗೆ ಹೋಗಲು ಮುಂದಾದರು. ನಂತರ ಲಾಡ್ಜ್ ಆಡಳಿತ ಮಂಡಳಿಯು ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿತು; ಆದರೆ ಅಲ್ಲಿನ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು. ನಂತರ ಪೆÇಲೀಸರು ಕ್ಯಾಬ್ ಚಾಲಕ ನನ್ನು ಬಂಧಿಸಿದರು. ಈನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಕಳೆದ ಶನಿವಾರವೇ, ಬೆಳಗಾವಿಯಲ್ಲಿ ಲವು ಮಾಮಲೇದಾರ್ ರವರ ಶವಪರೀಕ್ಷೆ ನಡೆಸಿದ ನಂತರ ಮ್ಯಾಜಿಸ್ಟ್ರೇಟ್ ಅವರ ಶವವನ್ನು ಗೋವಾಕ್ಕೆ ತರಲಾಯಿತು. ಅವರ ಅಂತ್ಯಕ್ರಿಯೆಯನ್ನು ಭಾನುವಾರ ಬೆಳಿಗ್ಗೆ ಫೆÇೀಂಡಾದಲ್ಲಿ ರಾಜಕೀಯ ಮುಖಂಡರು ಮತ್ತು ವಿವಿಧ ಕ್ಷೇತ್ರಗಳ ಜನರ ಸಮ್ಮುಖದಲ್ಲಿ ನಡೆಸಲಾಯಿತು.