ಸುದ್ಧಿಕನ್ನಡ ವಾರ್ತೆ
Goa : ಗೋವಾದ ಪಣಜಿಯ ಮಳಾದಲ್ಲಿರುವ ಪ್ರಸಿದ್ಧ ಶ್ರೀ ಮಾರುತಿ ಗಡ ದೇವಸ್ಥಾನದ ಜಾತ್ರೆಯು ಶುಕ್ರವಾರದಿಂದ ಆರಂಭಗೊಂಡಿದೆ.

ಎತ್ತರದ ಗುಡ್ಡದ ಮೇಲಿರುವ ಶ್ರೀ ಮಾರುತಿ ದೇವಸ್ಥಾನವು ಮಾರುತಿ ಗಡ ಎಂದೇ ಪ್ರಸಿದ್ಧಿ ಪಡೆದಿದೆ. ಈ ದೇವಸ್ಥಾನದಿಂದ ಸುತ್ತಮುತ್ತಲಿನ ನಗರವನ್ನು ಎತ್ತರದಿಂದ ವೀಕ್ಷಿಸಬಹುದಾಗಿದೆ. ಈ ಸುಂದರ ವಾತಾವರಣವು ಜಾತ್ರೆಯ ಮತ್ತೊಂದು ಆಕರ್ಷಣೆಯಾಗಿದೆ.

ಈ ದೇವಸ್ಥಾನಕ್ಕೆ ನೂರಾರು ಎಟ್ಟಿಲುಗಳನ್ನು ಏರಿ ಹೋಗಬೇಕಾಗಿರುವು ಮಾತ್ರವಲ್ಕದೆಯೇ ದೇವಸ್ಥಾನ ಪ್ರವೇಶಿಸುವಷ್ಟರಲ್ಲಿ ದೇವತಾ ಭಕ್ತಿಯು ಇಮ್ಮಡಿಗೊಳ್ಳುತ್ತದೆ.

ದೇವಸ್ಥಾನದ ಕೆಳಭಾಗದಲ್ಲಿ ಜಾತ್ರೆ ಪೇಟೆ ಬಂದಿದ್ದು, ದೇವರ ದರ್ಶನ ಪಡೆದು ಭಕ್ತರು ಜಾತ್ರೆಯಲ್ಲಿ ವಿವಿಧ ವಸ್ತುಗಳ ಖರೀದಿಗೆ ತೆರಳುತ್ತಿರುವುದು ಕಂಡುಬರುತ್ತಿದೆ. ಈ ಪ್ರಸಿದ್ಧ ದೇವಸ್ಥಾನಕ್ಕೆ ಅದರಲ್ಲೂ ಈ ಜಾತ್ರೆಯ ಸಂದರ್ಭದಲ್ಲಿ ಭೇಟಿನೀಡಲೇ ಬೇತು.