ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪ್ರಮುಖವಾಗಿ ಗೃಹ ಆಧಾರ (GIRHA AADHAR) ಯೋಜನೆಯು ಗೋವಾದಲ್ಲಿ ಗೃಹಿಣಿಯರಿಗೆ ಆಧಾರವಾಗಿದೆ. ಈ ಯೋಜನೆಯನ್ನು ಗೋವಾ ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರೀಕರ್ ರವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಯೋಜನೆಯಾಗಿದ್ದು, ಅಂದು ಈ ಯೋಜನರಯ ಅಡಿಯಲ್ಲಿ ಪ್ರತಿ ತಿಂಗಳು ಗೃಹಿಣಿಯರಿಗೆ 1200 ರೂ ನೀಡಲಾಗುತ್ತಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಈ ಯೋಜನೆಯ ಮೊತ್ತವನ್ನು 1500 ರೂಗಳಿಗೆ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಗೋವಾದಲ್ಲಿ ನೆಲೆಸಿರುವ ಹಲವು ಕನ್ನಡಿಗರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಗೋವಾದಲ್ಲಿ ಅಗತ್ಯ ದಾಖಲಾತಿ ಹೊಂದಿರುವ ಕನ್ನಡಿಗರಿಗೂ ಗೋವಾ ಸರ್ಕಾರ ವಿವಿಧ ಯೋಜನೆಗಳ ಲಾಭ ನೀಡುತ್ತಿದೆ.
ಗೃಹ ಆಧಾರ ಎಂದರೇನು…?
ಗೃಹ ಆಧಾರ (GIRHA AADHAR) ಎಂಬುದು ಗೋವಾ ಸರ್ಕಾರದ ಪ್ರಮುಖ ಜನಪರ ಯೋಜನೆಗಳಲ್ಲೊಂದಾಗಿದೆ. ಈ ಯೋಜನೆಯ ಮೂಲಕ ಗೋವಾದಲ್ಲಿರುವ ಗೃಹಿಣಿಯರಿಗೆ ಪ್ರತಿ ತಿಂಗಳೂ ಸರ್ಕಾರವು ಅವರ ಖಾತೆಗೆ 1500 ರೂ ಜಮಾ ಮಾಢುತ್ತದೆ. ಸರ್ಕಾರಿ ಕೆಲಸ ಅಥವಾ ಇತರ ಉದ್ಯೋಗದಲ್ಲಿರುವವರಿಗೆ ಈ ಯೋಜನೆಯ ಅಡಿಯಲ್ಲಿ ಸರ್ಕಾರ ಹಣವನ್ನು ನೀಡುವುದಿಲ್ಲ. ಇದು ಕೇವಲ ಮನೆಯಲ್ಲಿಯೇ ಇರುವ ಗೃಹಿಣಿಯರಿಗೆ ಇರುವ ಯೋಜನೆಯಾಗಿದೆ.
ಗೃಹ ಆಧಾರಕ್ಕೆ ಈ ಎಲ್ಲ ಪ್ರಮಾಣಪತ್ರ ಅಗತ್ಯ…
ಗೋವಾ ರಾಜ್ಯ ಸರ್ಕಾರದ ಎಲ್ಲಾ ಪ್ರಮುಖ ಯೋಜನೆಗಳು ಗೋವಾದಲ್ಲಿ ನೆಲೆಸಿರುವ ಹಲವು ಜನ ಕನ್ನಡಿಗರಿಗೂ ಲಭಿಸುತ್ತಿದೆ. ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಧರ್ಮಪತ್ನಿಗೆ ಈ ಯೋಜನೆಯ ಲಾಭ ಸಿಗುವಂತೆ ಮಾಡಲು ಮ್ಯಾರೇಜ್ ಸರ್ಟಿಫಿಕೇಟ್, ಪಂಚಾಯತಿ ಅಥವಾ ತಹಶೀಲ್ದಾರರಿಂದ 15 ವರ್ಷದ ವಾಸ್ತವ್ಯದ ದಾಖಲಾತಿಯ ಪ್ರಮಾಣಪತ್ರ, ಸ್ಥಳೀಯ ಗುರುತಿನ ಚೀಟಿ, ರೇಷನ್ ಕಾರ್ಡ, ಪಾನ್ ಕಾರ್ಡ, ಜನ್ಮ ದಾಖಲಾತಿಯ ಪ್ರಮಾಣಪತ್ರ, ಪಂಚಾಯತಿಯಿಂದ ಆದಾಯ ಪ್ರಮಾಣಪತ್ರ, ಸ್ಥಳೀಯ ವಾಸ್ತವ್ಯದ ಮನೆಯ ಅಡ್ರೆಸ್ ಫ್ರೂಫ್, ನಿಮ್ಮ ಧರ್ಮಪತ್ನಿಯ ಹೆಸರಲ್ಲಿ ಇರುವ ಸ್ಥಳೀಯ ಬ್ಯಾಂಕ್ ಪಾಸ್ ಬುಕ್ ಇವಿಷ್ಟು ದಾಖಲಾತಿಯನ್ನು ಇಟ್ಟು ಗೃಹ ಆಧಾರ್ ಅರ್ಜಿ ಭರ್ತಿ ಮಾಡಬಹುದಾಗಿದೆ.
ಗೃಹ ಆಧಾರದ (GIRHA AADHAR) ಕಛೇರಿಯಲ್ಲಿ ಈಗಾಗಲೇ ಅರ್ಜಿ ಭರ್ತಿ ಮಾಡಿ ಬಂದ ಹಲವು ಅರ್ಜಿಗಳನ್ನು ಖಾಯ್ದಿರಿಸಲಾಗಿದೆ. ಇವುಗಳನ್ನು ಹಂತ ಹಂತವಾಗಿ ಪರಿಶೀಲಿಸಿ ಯಾವುದೇ ಲೋಪ ದೋಷ ಇಲ್ಲವಾದಲ್ಲಿ ಗೋವಾ ಸರ್ಕಾರ ಅವರಿಗೆ ಗೃಹ ಆಧಾಋ ಯೋಜನೆಯ ಲಾಭ ನೀಡುತ್ತದೆ. ಇಲ್ಲವಾದಲ್ಲಿ ಇನ್ನೂ ಅಗತ್ಯವಿರುವ ದಾಖಲಾತಿಗಳನ್ನು ಕೇಳಬಹುದು. ಈ ಕುರಿತು ತಮ್ಮ ಅರ್ಜಿಯ ಪರಿಶೀಲಿಸಲು ಅರ್ಜಿಯ ಫಾರ್ಮ ಮೇಲಿರುವ ಕೃಮಾಂಕ ಇದ್ದರೆ ಸಾಕು.
ಗೋವಾದಲ್ಲಿ ಕಳೆದ 15 ವರ್ಷಗಳ ದಾಖಲಾತಿ ಹೊಂದಿನ ಕನ್ನಡಿಗ ವ್ಯಕ್ತಿ ತಾನು ಕರ್ನಾಟಕದ ಹುಡುಗಿಯನ್ನೇ ಮದುವೆಯಾಗಿ ಬಂದು ಎರಡೇ ವರ್ಷ ಕಳೆದಿದ್ದರೂ ಕೂಡ ಅವರೂ ಕೂಡ ಗೃಹ ಆಧಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕೆ ಗಂಡನ ಹೆಸರಿನಲ್ಲಿ 15 ವರ್ಷದ ದಾಖಲಾತಿ ಮತ್ತು ಪತ್ನಿಯ ಹೆಸರಿನಲ್ಲಿ ಗೋವಾಕ್ಕೆ ಬಂದು ಎಷ್ಟು ವರ್ಷವಾಗಿದ್ದರೂ ಅದರ ದಾಖಲಾತಿ ಇದ್ದರೆ ಸಾಕು. ಗಂಡನ ಹೆಸರಲ್ಲಿ 15 ವರ್ಷದ ದಾಖಲಾತಿ ಇದ್ದರೆ ಈ ಯೋಜನೆಯ ಲಾಭ ಸಿಗುತ್ತದೆ.
ಈಗಾಗಲೇ ಗೃಹ ಆಧಾರ ಯೋಜನೆಯ ಲಾಭ ಪಡೆದಿರುವವರಿಗೆ ಈ ಮಾಹಿತಿ ತಿಳಿದಿದ್ದರೂ ಕೂಡ, ಗೋವಾದಲ್ಲಿ ನೆಲೆಸಿರುವ ಅದೆಷ್ಟೋ ಕನ್ನಡಿಗರು ಈ ಮಾಹಿತಿಯಿಲ್ಲದೆಯೇ ಗೃಹ ಆಧಾರ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಎಲ್ಲ ದಾಖಲಾತಿಯನ್ನು ಹೊಂದಿ ಅರ್ಜಿ ಸಲ್ಲಿಸಬಹುದಾಗಿದೆ.