ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ಕನ್ನಡ ಭವನದ ಕನಸು ನನಸಾಗುತ್ತಿದೆ. ಕರ್ನಾಟಕ ಸರ್ಕಾರವು ಗೋವಾದ ವೆರ್ನ ದಲ್ಲಿ ಈಗಾಗಲೇ ಜಾಗ ಖರೀದಿಸಿದೆ. ಈ ಜಾಗದ ಸ್ವಚ್ಛತಾ ಕಾರ್ಯ ಬರದಿಂದ ಸಾಗಿದೆ.
ಕನ್ನಡ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ ರವರು ಜುಲೈ 30 ರಂದು ವಿಶೇಷ ಸಭೆಯನ್ನು ಕರೆದಿದ್ದಾರೆ. ಈ ಹಿನ್ನಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಅಧ್ಯಕ್ಷ ಸಿದ್ದಣ್ಣ ಮೇಟಿ, ಹಾಗೂ ಕನ್ನಡಿಗ ಮುಖಂಡರಾದ ರಾಜೇಶ್ ಶೆಟ್ಟಿ, ಶಿವಾನಂದ ಬಿಂಗಿ, ತವರಪ್ಪ ಲಮಾಣಿ, ಬಾಬು ಭೂಸಾರಿ, ಮತ್ತಿತರರ ಉಪಸ್ಥಿತಿಯಲ್ಲಿ ಮಂಗಳವಾರ ಕನ್ನಡ ಭವನ ನಿರ್ಮಾಣದ ಜಾಗದ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಗೋವಾ ಕನ್ನಡ ಸಂಘಟನೆಗಳ ಹೋರಾಟ ಇದೀಗ ಫಲಿಸಿದಂತಾಗಿದೆ.