ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಮೂಲತಃ ಗೋಮಂತಕೀಯರು ಎಷ್ಟಿದ್ದಾರೆ..? 100 ಮನೆಗಳುಳ್ಳ ಊರಿನಲ್ಲಿ ಬೃಹತ್ ಅಪಾರ್ಟಮೆಂಟ್ ನಿರ್ಮಿಸಿ 200 ಪ್ಲ್ಯಾಟ್ ನಿರ್ಮಿಸಿ ಮಾರಾಟ ಮಾಡಲಾಗುತ್ತಿದೆ. ದಿಲ್ಲಿ ಲೆ ಲಿಯಾ ಅಬ್ ಗೋವಾ ಭಿ ಲೆಂಗೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿಯೇ ನಾವು ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿದ್ದಾ…? ಎಂದು ಮಾಜಿ ಶಾಸಕ ಹಾಗೂ ನಿವೃತ್ತ ನ್ಯಾಯಮೂರ್ತಿ ಪೆರ್ದಿನ್ ರಿಬೆಲೊ ಪ್ರಶ್ನಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- 2046 ರವರೆಗೆ 24 ಟಿಎಂಸಿ ನೀರು ಗೋವಾಕ್ಕೆ ಲಭಿಸಲಿದೆ, ಆದರೆ ಇದಕ್ಕಾಗಿ 59 ಯೋಜನೆಗಳನ್ನು ಜಾರಿಗೆ ತರಬೇಕಿದೆ. ಒಂದುವೇಳೆ ಈ ನೀರಿನ ಯೋಗ್ಯ ಉಪಯೋಗವಾಗಿಲ್ಲ ಎಂದಾದರೆ ಪುನಃ ಮಹದಾಯಿ ನದಿ ನೀರಿನ ಹಂಚಿಕೆ 2046 ರ ವರೆಗೆ ಆಗಲಿದೆ. ಇದರಿಂದಾಗಿ ಈ ನಿಟ್ಟಿನಲ್ಲಿ ಗಂಭೀರವಾಗಿ ವಿಚಾರ ಮಾಡುವ ಅಗತ್ಯವಿದೆ. ಗೋವಾ ಪರಿಸರ, ಜೈವಿಕ ವೈವಿದ್ಯ, ಸಮುದ್ರ ಮಟ್ಟದಲ್ಲಿ ಹೆಚ್ಚಳ, ಇವೆಲ್ಲವನ್ನೂ ನಾವು ಗಂಭೀರವಾಗಿ ವಿಚಾರ ಮಾಡುತ್ತಿಲ್ಲ. ಪಣಜಿಯಲ್ಲಿ ದಿನಕ್ಕೆ ಸರಿಯಾಗಿ ಎಲ್ಲರಿಗೂ 15 ನಿಮಿಷ ನೀರು ಸಿಗುತ್ತಿಲ್ಲ, ಆದರೆ ಆವು ಸ್ವಯಂಪೂರ್ಣದ ಬಗ್ಗೆ ಮಾತನಾಡುತ್ತೇವೆ. ಪ್ರತಿಯೊಬ್ಬರೂ ಕೂಡ ಗೋವಾದ ಭವಿಷ್ಯದ ಬಗ್ಗೆ ಗಂಭೀರವಾಗಿ ವಿಚಾರ ಮಾಡುವ ಅಗತ್ಯವಿದೆ ಎಂದು ಪೆರ್ಡಿನ್ ರಿಬೆಲೊ ಹೇಳಿದ್ದಾರೆ.
ಗೋವಾ ಸರ್ಕಾರವು ಮಹದಾಯಿ ಬಗ್ಗೆ ಮಾತನಾಡುತ್ತದೆ, ಆದರೆ ಮಾಡುವುದೇ ಬೇರೆ. ಮಹದಾಯಿ ವಿಷಯದಲ್ಲಿ ಗೋವಾ ಸರ್ಕಾರ ಗಂಭೀರವಾಗಿಲ್ಲ ಎಂದು ಪೆರ್ದಿನ್ ರಿಬೆಲೊ ಹೇಳಿದ್ದಾರೆ.