ಸುದ್ಧಿಕನ್ನಡ ವಾರ್ತೆ
Goa: ನನಗೆ ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಆಫರ್ ಬಂದಿರಲಿಲ್ಲ. ಅಂತೆಯೇ ಗೋವಾದಲ್ಲಿ ಯಾವುದೇ ರಾಜಕೀಯ ಹುದ್ದೆಯಲ್ಲಿ ನಾನು ಸ್ಫರ್ಧೆಯಲ್ಲಿಲ್ಲ. ಇವೆಲ್ಲವೂ ಸುಳ್ಳುಸುದ್ದಿ ಎಂದು ಕೇರಳದ ರಾಜ್ಯಪಾಲ ಹಾಗೂ ಗೋವಾದ ಸುಪುತ್ರ ರಾಜೇಂದ್ರ ಅರ್ಲೇಕರ್ ಪುನರುಚ್ಛರಿಸಿದ್ದಾರೆ.
ರಾಜೇಂದ್ರ ಅರ್ಲೇಕರ್ ರವರು ಹೊಸ ವರ್ಷದಂದು ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ ರವರನ್ನು ಭೇಟಿ ಮಾಡಿ ಕೇರಳ ರಾಜ್ಯಪಾಲರಾಗಿ ಜವಾಬ್ದಾರಿ ಸ್ವೀಕರಿಸುವ ಮುನ್ನ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಅರ್ಲೆಕರ್- ಗೋವಾದ ಹಾಲಿ ರಾಜ್ಯಪಾಲರು ಮೂಲತಃ ಕೇರಳದವರಾಗಿರುವ ಹಿನ್ನೆಲೆಯಲ್ಲಿ ನಾನು ಕೇರಳದ ವಿಷಯದ ಕುರಿತು ನಾನು ಚರ್ಚೆ ನಡೆಸಿದೆ. ಗೋವಾದ ರಾಜ್ಯದ ರಾಜ್ಯಪಾಲರಾಗಿರುವ ಅವರಿಗೆ ಗೋವಾದ ವಿವಿಧ ವಿಷಯಗಳ ಬಗ್ಗೆ ಗಮನವಿದೆ ಎಂದು ಕೇರಳದ ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್ ನುಡಿದರು.
ಗೋವಾದ ರಾಜ್ಯಪಾಲರು ನನ್ನ ಆತ್ಮೀಯ ಮಿತ್ರರಾಗಿದ್ದಾರೆ. ಅವರು ಕೇರಳದವರಾಗಿರುವುದರಿಂದ ಅವರೊಂದಿಗೆ ಅಲ್ಲಿನ ವಿಷಯದ ಕುರಿತು ಚರ್ಚೆ ನಡೆಸಿದ್ದೇನೆ. ಅವರು ಕೇರಳದ ಪ್ರವಾಸೋದ್ಯಮ ಮತ್ತು ಅರ್ಥವ್ಯವಸ್ಥೆಯ ಕುರಿತು ಮಾಹಿತಿ ನೀಡಿದರು ಎಂದು ರಾಜೇಂದ್ರ ಅರ್ಲೇಕರ್ ಮಾಹಿತಿ ನೀಡಿದರು.