ಸುದ್ಧಿಕನ್ನಡ ವಾರ್ತೆ
Goa: ಲಲಿತಾ ಭಜನಾ ಮಂಡಳಿ ಗೋವಾ ರವರ ವತಿಯಿಂದ ಗೋವಾದ ಮಾರ್ಶೆಲ್ ತಾರೀವಾಡ ಶ್ರೀ ಸಾಯಿಬಾಬಾ ಭಕ್ತ ಮಂದಿರದಲ್ಲಿ ಡಿಸೆಂಬರ್ 21 ರಂದು ಮಧ್ಯಾನ್ಹ 3.30 ಕ್ಕೆ “ಭಗವಧ್ಗೀತಾ ಸಪ್ತಾಹ ಸಮಾಪ್ತಿ” ಕಾರ್ಯಕ್ರಮ ಆಯೋಜಿಸಲಾಗಿದೆ.

ಲಲಿತಾ ಭಜನಾ ಮಂಡಳಿ ಗೋವಾ ಮಹಿಳೆಯರಿಂದ ಡಿಸೆಂಬರ್ 15 ರಿಂದ ಆನ್ ಲೈನ್ ನಲ್ಲಿ 6 ದಿನಗಳ ಕಾಲ ಶ್ರೀಮಧ್ಬಗವಧ್ಗೀತಾ 9 ನೇಯ ಅಧ್ಯಾಯದ ಪಾರಾಯಣ ಪೂರ್ಣಗೊಳಿಸಿ ಸಪ್ತಾಹದ 7 ನೇಯ ದಿನದ ಪಾರಾಯಣವನ್ನು ಡಿಸೆಂಬರ್ 21 ರಂದು ಶನಿವಾರ ಶ್ರೀ ಸಾಯಿಬಾಬಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಶ್ರೀಮತಿ ಸರಸ್ವತಿ ಮತ್ತು ಶ್ರೀ ನಾರಾಯಣ ಭಟ್ ರವರ ಪ್ರಾಯೋಜಕತ್ವದಲ್ಲಿ ಇಂದು ಭಗವಧ್ಗೀತಾ ಸಪ್ತಾಹದ ಮುಕ್ತಾಯ ಸಮಾರಂಭ , ಭಗವಧ್ಗೀತಾ ಪಾರಾಯಣ, ಶಾಂಕರ ಸ್ತೋತ್ರಗಳು, ಆರತಿ ಮತ್ತು ಪ್ರಸಾದ ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹವ್ಯಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಆದೇಶದಂತೆ ಈ ಭಗವಧ್ಗೀತಾ ಸಪ್ತಾಹ ಮುಕ್ತಾಯ ಸಮಾರಂಭದಲ್ಲಿ ಎಲ್ಲರೂ ಪಾಲ್ಗೊಳ್ಳಿ.