ಸುದ್ಧಿಕನ್ನಡ ವಾರ್ತೆ
Goa Mapusa: ಗೋವಾದ ಹಿರಿಯ ಕನ್ನಡಿಗ ಹಾಗೂ ಮಾಪ್ಸಾ ಕವಿಶೈಲ ಕನ್ನಡ ಸಂಘದ ಉಪಾಧ್ಯಕ್ಷ ಬಸವಂತಪ್ಪ ಕರಿಯಪ್ಪ ತಳವಾರ ರವರು ಡಿಸೆಂಬರ್ 19 ರಂದು ವಿಧಿವಷರಾಗಿದ್ದಾರೆ. ಅವರು ಗೋವಾದ ಮಾಪ್ಸಾದಲ್ಲಿ ವಾಸಿಸುತ್ತಿದ್ದರು. ಅವರು ಮೂಲತಃ ಮಲ್ಲಾಪುರ (ಸೊರಬ)ದ ನೇರಲಗಿ ಗ್ರಾಮದವರು. ಕಳೆದ ಹಲವು ವರ್ಷಗಳಿಂದ ಉದ್ಯೋಗ ನಿಮಿತ್ತ ಗೋವಾದಲ್ಲಿ ನೆಲೆಸಿದ್ದರು.

ಗೋವಾದಲ್ಲಿ ಕನ್ನಡ ಪರ ಕಾರ್ಯಕ್ರಮ ಎಲ್ಲಿಯೇ ಇದ್ದರೂ ಕೂಡ ಅವರು ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದರು. ಮೃತರ ಅಂತ್ಯಸಂಸ್ಕಾರ ಶುಕ್ರವಾರ ಮಧ್ಯಾನ್ಹ 12 ಗಂಟೆಗೆ ಮಾಪ್ಸಾದ ದತ್ತವಾಡಿಯ ವೈಕುಂಠಧಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಇವರ ನಿಧನಕ್ಕೆ ಗೋವಾದ ವಿವಿಧ ಕನ್ನಡ ಸಂಘಟನೆಗಳ ಪ್ರಮುಖರು ಕಂಬನಿ ಮಿಡಿದಿದ್ದಾರೆ.

ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶಟ್ಟರ್ ರವರು ಬಸವಂತಪ್ಪ ತಳವಾರ ರವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.