ಸುದ್ಧಿಕನ್ನಡ ವಾರ್ತೆ
Goa(Panaji): ಇನ್ನೆರಡು ವರ್ಷಗಳಲ್ಲಿ ಪರ್ವರಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲಿದೆ. ಮಡಗಾಂವ್ ಬೈಪಾಸ್ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಈ ಕಾಮಗಾರಿಗಳಿಂದ ಜನರಿಗೆ ತೊಂದರೆಯಾಗುತ್ತಿದೆ ಎಂಬ ಅರಿವು ನನಗಿದೆ, ಆದರೆ ಉತ್ತಮ ಭವಿಷ್ಯಕ್ಕಾಗಿ ಜನರು ಸ್ವಲ್ಪ ಸಹಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನುಡಿದರು.
ಪಣಜಿ ಸಮೀಪದ ಚಿಂಬಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿರುವ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಪ್ರಮೋದ ಸಾವಂತ್ ಉದ್ಘಾಟಿಸಿದರು. ಈ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ರುಡಾಲ್ಫ್ ಫನಾರ್ಂಡಿಸ್, ಪಣಜಿ ಮೇಯರ್ ರೋಹಿತ್ ಮಾನ್ಸೆರಾತ್, ಜಿಲ್ಲಾ ಪಂಚಾಯತ್ ಸದಸ್ಯ ಗಿರೀಶ್ ಉಸ್ಕೈಕರ್, ಚಿಂಬಲ್ ಪಂಚಾಯತ ಅಧ್ಯಕ್ಷ ಸಂದೀಪ್ ಶಿರೋಡ್ಕರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಚಿಂಬಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಪೂರ್ಣಗೊಳಿಸಲು ಮಂಗಳವಾರದವರೆಗೆ ಗಡುವು ನೀಡಲಾಗಿತ್ತು. ಗಡುವಿನಂತೆ ಮಧ್ಯಾಹ್ನ 3 ಗಂಟೆಗೆ ಕಾಮಗಾರಿ ಪೂರ್ಣಗೊಂಡು ಸಂಜೆ ಉದ್ಘಾಟನೆಗೊಂಡಿತು. ಕಾರ್ತಿಕಿ ಏಕಾದಶಿ ಶುಭ ದಿನವಾಗಿರುವುದರಿಂದ ಬೆಳಗ್ಗೆ 11 ಗಂಟೆಗೆ ಶಾಸಕ ರುಡಾಲ್ಫ್ ಫೆನಾರ್ಂಡಿಸ್ ಅವರಿಗೆ ಕರೆ ಮಾಡಿ ಸೇತುವೆ ಉದ್ಘಾಟನೆ ಕುರಿತು ಮಾಹಿತಿ ನೀಡಿರುವುದಾಗಿ ಮುಖ್ಯಮಂತ್ರಿ ಸಾವಂತ್ ತಿಳಿಸಿದರು.
ಚಿಂಬಲ್ ಮೇಲ್ಸೇತುವೆಯ ಒಂದು ಹಂತವನ್ನು ರೂ.42 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಚಿಂಬಲ್ ಸೇತುವೆಯ ಎರಡನೇ ಹಂತ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೆಳಗಿನಿಂದ ವಾಹನ ಸಂಚಾರ ನಿಲ್ಲಿಸಿ ಕಾಮಗಾರಿ ಆರಂಭಿಸಲಾಗದೆ ಎರಡೂ ಕಡೆ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.ಈ ಕುರಿತು ಮಾತನಾಡಿದ ಮುಖ್ಯಮಂತ್ರಿ, ಆಂಬುಲೆನ್ಸ್ ಮೇಲ್ಸೇತುವೆ ಮೇಲೆ ಹಾದು ಹೋಗಿದ್ದರಿಂದ ಕನಿಷ್ಠ 8ರಿಂದ 10 ನಿಮಿಷ ಉಳಿತಾಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಸಿಎಂ ಕಾರಣದಿಂದ ಸೇತುವೆ ಪೂರ್ಣಗೊಂಡಿದೆ: ರುಡಾಲ್ಫ್
ತಾವು ಈ ಕ್ಷೇತ್ರದ ಶಾಸಕರಾಗಿದ್ದಾಗ ಈ ಸೇತುವೆಗೆ ಎರಡು ಪಿಲ್ಲರ್ಗಳನ್ನು ಮಾತ್ರ ನಿರ್ಮಿಸಲಾಗಿತ್ತು. ಸೇತುವೆ ಯಥಾಸ್ಥಿತಿಯಲ್ಲಿ ಉಳಿಯಬೇಕಿತ್ತು ಆದರೆ ಬಿಜೆಪಿ ಸರ್ಕಾರ ಅದನ್ನು ಪೂರ್ಣಗೊಳಿಸಿತು. ಮುಖ್ಯಮಂತ್ರಿಗಳು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಸಂತಾಕ್ರೂಜ್ ಶಾಸಕ ರುಡಾಲ್ಫ್ ಫೆನಾರ್ಂಡಿಸ್ ನುಡಿದರು.