ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತಿದೆ. ದೀಪಾವಳಿ ಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಗೋವಾದಲ್ಲಿ ಹೂವಿನ ಬೇಡಿಕೆ ಕೂಡ ಹೆಚ್ಚಾಗಿದ್ದು, ದರ ಕೂಡ ಗಗನಕ್ಕೇರಿದೆ. ಚೆಂಡು ಹೂವು 150 ರಿಂದ 200 ಪ್ರತಿ ಕೇಜಿ ದರದಂತೆ ಮಾರಾಟ ಮಡಲಾಗುತ್ತಿದೆ.

ಗೋವಾದಲ್ಲಿ ಗುರುವಾರ ಮತ್ತು ಶುಕ್ರವಾರ ಈ ಎರಡೂ ದಿನಗಳ ಕಾಲ ಪ್ರಸಕ್ತ ವರ್ಷ ಅಮಾವಾಸ್ಯೆ ಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಗುತ್ತದೆ. ಅಂಗಡಿ, ಹೋಟೆಲ್, ಹೋಗೆ ವಿವಿಧ ಉದ್ಯಮಗಳಲ್ಲಿ ಲಕ್ಷ್ಮೀ ಪೂಜೆಯ ಹಿನ್ನೆಲೆಯಲ್ಲಿ ಚೆಂಡು ಹೂವಿನಿಂದ ಅಲಂಕಾರ ಮಾಡಲಾಗುತ್ತದೆ. ಇದರಿಂದಾಗಿ ಚೆಂಡು ಹೂವಿನ ದರ ಕೂಡ ಹೆಚ್ಚಾಗಿರುವುದು ಕಂಡುಬರುತ್ತಿದೆ.