ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ “ತುಳು ಕೂಟ ಗೋವಾ” ( “Tulu Kuta Goa ) “ಅಕ್ಟೋಬರ್ 20 ರಂದು ಮಧ್ಯಾನ್ಹ 2.30 ಕ್ಕೆ ಗೋವಾ ರಾಜಧಾನಿ ಪಣಜಿ ಸಮೀಪದ ಪರ್ವರಿಯ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ನಡೆಯಲಿದೆ.

ಕರ್ನಾಟಕದ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್ ರವರು ಸಮಾರಂಭದ ಉಧ್ಘಾಟನೆ ನೆರವೇರಿಸಲಿದ್ದಾರೆ. ಪುತ್ತೂರು ಕ್ಷೇತ್ರದ ಶಾಸಕ ಅಶೋಕ ಕುಮಾರ ರೈ ರವರು ತುಳು ಕೂಟದ ಉಧ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ತುಳು ಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡಾ ರವರು ಉಪಸ್ಥಿತರಿರುವರು.

ಮುಖ್ಯ ಭಾಷಣಕಾರರಾಗಿ ಉಪನ್ಯಾಸಕರಾದ ಡಾ.ಅರುಣ ಉಲ್ಲಾಳ, ಗೌರವ ಅತಿಥಿಗಳಾಗಿ ಗೋವಾ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವ ರೋಹನ್ ಖಂವಟೆ, ಅತಿಥಿಗಳಾಗಿ-ದಕ್ಷಿಣ ಕನ್ನಡ ಕಂಬಳ ಕಮೀಟಿಯ ಕಾರ್ಯದರ್ಶಿ ಕೆ.ಗುಣಪಾಲ ಕದಂಬ, ತುಳು ಚಿತ್ರ ನಿರ್ದೇಶಕ ವಿಜಯಕುಮಾರ್ ಕೋಡಿಯಾಲಬೈಲ್, ಪ್ರೊ. ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳು ಚಿತ್ರ ನಿರ್ದೇಶಕ ಪ್ರಸನ್ನ ಶೆಟ್ಟಿ ಬೈಲೂರ, ಮೂಡುಬಿದ್ರೆ ತುಳು ಕೂಟದ ಅಧ್ಯಕ್ಷ ಧಾನಕೀರ್ತಿ ಬಾಳಿಪ, ರವರು ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಗೋವಾ ತುಳು ಕೂಟದ ಗೌರವಧ್ಯಕ್ಷ ಸದಾನಂದ ಶೆಟ್ಟಿ ಬೆಳವಲ, ತುಳು ಕೂಡ ಗೋವಾದ ಗೌರವಾಧ್ಯಕ್ಷ ಚಂದ್ರಹಾಸ ಅಮಿನ್, ತುಳು ಕೂಟ ಗೋವಾದ ಗೌರವಾಧ್ಯಕ್ಷ ವಿಜಯೇಂದ್ರ ಶೆಟ್ಟಿ, ಗೋವಾದ ತುಳು ಕೂಟದ ಅಧ್ಯಕ್ಷ ಗಣೇಶ ಶೆಟ್ಟಿ ಇರವತ್ತೂರ್, ಗೋವಾ ತುಳು ಕೂಟದ ಕಾರ್ಯದರ್ಶಿ ಶಶಿಧರ್ ನಾಯ್ಕ, ಗೋವಾ ತುಳು ಕೂಟದ ಖಜಾಂಚಿ ಸಿಎ ಪ್ರಶಾಂತ ಜೈನ್, ಗೋವಾ ತುಳು ಕೂಟದ ಸಂಚಾಲಕ ಅಶೋಕ ಶೆಟ್ಟಿ ಮುದಾರ್, ರವರು ಉಪಸ್ಥಿತರಿರುವರು. ಕಾರ್ಯಕ್ರಮ ನಿರೂಪಕರಾಗಿ ನಿತೇಶ್ ಶೆಟ್ಟಿ ಯೆಕ್ಕಾರ್ ರವರು ಆಗಮಿಸಲಿದ್ದಾರೆ.

ಇಷ್ಟೇ ಅಲ್ಲದೆಯೇ ಗೋವಾ ರಾಜ್ಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ನಂತರ “ಶಿವಧೂತೆ ಗುಳಿಗೆ” ನಾಟಕ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.