ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಲಕ್ಷಾಂತರ ಪ್ರವಾಸಿಗರ ಉಪಸ್ಥಿತಿಯಲ್ಲಿ ಹೊಸ ವರ್ಷ 2026 ರನ್ನು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಡಿಸೆಂಬರ್ 31 ರಂದು ಮಧ್ಯರಾತ್ರಿ 12 ಗಂಟೆ 1 ನಿಮಿಷಕ್ಕೆ ಸರಿಯಾಗಿ ಗೋವಾದ ಪ್ರಮುಖ ಬೀಚ್ ಗಳಲ್ಲಿ ಮತ್ತು ಪಣಜಿಯ ಮಾಂಡವಿ ನದಿ ತೀರದಲ್ಲಿ ಪಟಾಗಿ ಅಬ್ಬರದೊಂದಿಗೆ ಹೊಸ ವರ್ಷಕ್ಕೆ ಸ್ವಾಗತ ಕೋರಲಾಯಿತು.
ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗೋವಾದ ಮೀರಾಮಾರ್,ಕಲಂಗುಟ್, ವಾಗಾತೋರ್,ಶಿಕೇರಿ, ಮೋರಜೆಮ್ ಬೀಚ್ ಗಳು ಸೇರಿದಂತೆ ಪ್ರಮುಖ ಎಲ್ಲ ಬೀಚ್ ಗಳಲ್ಲಿ ಬುಧವಾರ ರಾತ್ರಿ ಪ್ರವಾಸಿಗರ ಗರ್ದಿ ಕಂಡುಬಂತು. ರಾತ್ರಿಯಾಗುತ್ತಿದ್ದಂತೆಯೇ ಪ್ರವಾಸಿಗರೊಂದಿಗೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಹೊಸ ವರ್ಷಕ್ಕೆ ಸ್ವಾಗತ ಕೋರಿದರು.
